ನಾನು ಪಾರದರ್ಶಕ ಸೇವೆ ನೀಡಿದ್ದೇನೆಂಬ ತೃಪ್ತಿ ನನಗಿದೆ

2 nrp 3.
ವರ್ಗಾವಣೆಯಾದ ತಾಪಂ ಇಒ ಎಸ್.ನಯನಾ ಅವರನ್ನು ತಾಪಂ ಹಾಗೂ ಗ್ರಾಪಂನಿಂದ ಸನ್ಮಾನಿಸಲಾಯಿತು. ಕೆ.ಡಿ.ಜೋಸ್ೆ, ಎ.ಸಂತೋಷ್‌ಕುಮಾರ್ ಇತರರಿದ್ದರು.
Published on

ಎನ್.ಆರ್.ಪುರ: ನಾವು ಎಷ್ಟು ಸೇವೆ ಸಲ್ಲಿಸಿದೆವು ಎನ್ನುವುದಕ್ಕಿಂತ ಇರುವಷ್ಟು ದಿನ ಎಂತಹ ಸೇವೆ ಸಲ್ಲಿಸಿದ್ದೇವೆ ಎಂಬುದು ಮುಖ್ಯ ಎಂದು ತಾಪಂ ಇಒ ಎಸ್.ನಯನಾ ಹೇಳಿದರು.
ಶನಿವಾರ ತಾಪಂ, ಪಿಡಿಒ ಹಾಗೂ ಸಿಬ್ಬಂದಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಾನು ಪಾರದರ್ಶಕ ಸೇವೆ ನೀಡಿದ್ದೇನೆಂಬ ತೃಪ್ತಿ ನನಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿದ್ದೇನೆ. ಪ್ರಾಮಾಣಿಕವಾಗಿದ್ದರೆ ಎಲ್ಲಿಯಾದರೂ, ಯಾವ ಹುದ್ದೆಯನ್ನು ಬೇಕಾದರೂ ನಿಭಾಯಿಸಬಹುದು ಎಂದರು.
ಸಹಾಯಕ ನಿರ್ದೇಶಕ ಎನ್.ಎಲ್.ಮನೀಶ ಮಾತನಾಡಿ, ನಯನಾ ಅವರು ಪಿಡಿಒ ಆಗಿ, ಸಹಾಯಕ ನಿರ್ದೇಶಕರಾಗಿ, ನಂತರ ಇಒ ಆಗಿ ಸೇವೆ ಸಲ್ಲಿಸಿದ್ದಾರೆ ಎಂದರು.
ಆರ್‌ಡಿಪಿಆರ್ ನೌಕರರ ಸಂಘದ ಅಧ್ಯಕ್ಷ ಕೆ.ಡಿ.ಜೋಸ್ೆ ಮಾತನಾಡಿ, ಪ್ರಾಮಾಣಿಕ ಅಧಿಕಾರಿಗಳು ಸಿಗುವುದು ವಿರಳ. ನಿಸ್ವಾರ್ಥ ಸೇವೆ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇದೂರು, ಪಂಚಾಯತ್‌ರಾಜ್ ಸಹಾಯಕ ನಿರ್ದೇಶಕ ಎ.ಸಂತೋಷ್‌ಕುಮಾರ್, ಪಿಡಿಒ ಹಾಗೂ ಸಿಬ್ಬಂದಿ ಅನಿಸಿಕೆ ವ್ಯಕ್ತಪಡಿಸಿದರು. ಇಒ ಎಸ್.ನಯನಾ ಹಾಗೂ ಪದೋನ್ನತಿ ಹೊಂದಿದ ತಾಲೂಕು ಎಂಐಎಸ್ ಸಂಯೋಜಕಿ ಬಿ.ಎಲ್.ಸ್ನೇಹಾ ಅವರನ್ನು ಬೀಳ್ಕೊಡಲಾಯಿತು. ಕಚೆೇರಿ ಅಧೀಕ್ಷಕಿ ಕೆ.ಆರ್.ಮಧು, ಪಿಡಿಒ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net