ನಾನು ಬಿಜೆಪಿ ಸೇರುತ್ತಿಲ್ಲ, ಮುಂದಿನ ನಡೆಯನ್ನು ಶೀಘ್ರವೇ ನಿರ್ಧರಿಸುವೆ

sachin pilot
Published on

ನವದೆಹಲಿ: ರಾಜಸ್ಥಾನದ ಅಶೋಕ್​ ಗೆಹ್ಲೋಟ್​ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಸೆಟೆದಿರುವ ಸಚಿನ್​ ಪೈಲಟ್​ ತಾವು ಬಿಜೆಪಿ ಸೇರುತ್ತಿಲ್ಲ. ತಾನು ಇನ್ನೂ ಕಾಂಗ್ರೆಸ್​ ಪಕ್ಷದಲ್ಲೇ ಇರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಿಗೆ ಬುಧವಾರ ಮಾತನಾಡಿರುವ ಅವರು, ನಾನು ಖಂಡಿತವಾಗಿ ಬಿಜೆಪಿ ಸೇರುತ್ತಿಲ್ಲ. ಮುಂದಿನ ರಾಜಕೀಯ ನಡೆ ಏನು ಎಂಬುದನ್ನು ಶೀಘ್ರದಲ್ಲೇ ಸ್ಪಷ್ಟಪಡಿಸುವೆ ಎಂದು ಹೇಳಿದರು.

ನನ್ನ ವ್ಯಕ್ತಿಕ್ವಕ್ಕೆ ಮಸಿ ಬಳಿಯುವ ದೃಷ್ಟಿಯಿಂದ ನಾನು ಬಿಜೆಪಿ ಸೇರುತ್ತಿರುವುದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ನಾನು ಈಗಲೂ ಕಾಂಗ್ರೆಸ್​ನ ಕಟ್ಟಾಳು ಆಗಿದ್ದೇನೆ ಎಂದು 42 ವರ್ಷದ ಸಚಿನ್​ ಪೈಲಟ್​ ಹೇಳಿದರು.

ನಾನು ನನ್ನ ರಾಜಕೀಯ ಜೀವನದುದ್ದಕ್ಕೂ ಬಿಜೆಪಿಯನ್ನು ವಿರೋಧಿಸಿಕೊಂಡು ಬಂದಿದ್ದೇನೆ. ವಿಧಾನಸಭೆ ಚುನಾವಣೆಗಳಲ್ಲೂ ಕೂಡ ಅದರ ವಿರುದ್ಧ ಹೋರಾಟ ಮಾಡಿದ್ದೇನೆ. ಜತೆಗೆ ಆ ಪಕ್ಷವನ್ನು ಸೋಲಿಸಿದ್ದೇನೆ. ಹೀಗಿರುವಾಗ ನಾನೇಕೆ ಬಿಜೆಪಿ ಸೇರಲಿ ಎಂದು ಪ್ರಶ್ನಿಸಿದರು.

ನಾನು ರಾಜಸ್ಥಾನದ ಜನತೆಗೆ ಸೇವೆ ಸಲ್ಲಿಸುವ ಬಯಕೆ ಹೊಂದಿದ್ದೇನೆ. ಆದ್ದರಿಂದ, ಅವರಿಗೆ ಸೇವೆ ಸಲ್ಲಿಸಲು ನನ್ನ ಮುಂದಿನ ರಾಜಕೀಯ ನಡೆ ಏನಾಗಿರಬೇಕು ಎಂಬ ಬಗ್ಗೆ ಚಿಂತನೆ ನಡೆಸಿದ್ದೇನೆ. ಶೀಘ್ರದಲ್ಲೇ ಆ ಬಗ್ಗೆ ಸ್ಪಷ್ಟನೆ ನೀಡುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net