Italy ಪ್ರಧಾನಿ ಜಾರ್ಜಿಯಾ ಮೆಲೋನಿ ಜತೆ ಎಲಾನ್​ ಮಸ್ಕ್​ ಡೇಟಿಂಗ್​​!; ನೆಟ್ಟಿಗರಿಗೆ ‘ಎಕ್ಸ್’​​​ ಮಾಲೀಕ ಹೇಳಿದ್ದೇನು?

Untitled-design-2024-09-25T151838.511
Published on

ರೋಮ್​​: ನ್ಯೂಯಾರ್ಕ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇಟಲಿ(Italy) ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಎಕ್ಸ್​​ (ಹಿಂದಿನ ಟ್ವಿಟ್ಟರ್​) ಮಾಲೀಕ ಎಲಾನ್​ ಮಸ್ಕ್​​ ಹೊಗಳಿದ ಬಳಿಕ ಇಬ್ಬರು ಡೇಟಿಂಗ್​ ಮಾಡುತ್ತಿದ್ದಾರೆ ಎಂಬು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದೆ.

ಜಾರ್ಜಿಯಾ ಮೆಲೋನಿ ಇಟಲಿಯ ಪ್ರಧಾನಿಯಾಗಿ ನಾನು ಮೆಚ್ಚುವ ವ್ಯಕ್ತಿ, ಇಟಲಿಯ ಪ್ರಧಾನಿಯಾಗಿ ನಂಬಲಾಗದ ಕೆಲಸವನ್ನು ಮಾಡಿದ್ದಾರೆ. ಪ್ರಾಮಾಣಿಕ ಮತ್ತು ಸತ್ಯವಂತ ರಾಜಕಾರಣಿ ಎಂದು ಎಲಾನ್​​ ಹೇಳಿದರು. ಅಲ್ಲದೆ ಬಾಹ್ಯವಾಗಿ ಮಾತ್ರವಲ್ಲ ಆಂತರಿಕವಾಗಿಯೂ ಸುಂದರವಾಗಿರುವ ಜಾರ್ಜಿಯಾ ಮೆಲೋನಿ ಅವರಿಗೆ ಕೌನ್ಸಿಲ್ ಗ್ಲೋಬಲ್ ಸಿಟಿಜನ್ ಪ್ರಶಸ್ತಿಯನ್ನು ನೀಡುವುದು ಗೌರವವಾಗಿದೆ ಎಂದು ಹೇಳಿದರು.

ಅದರ ಜತಗೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರೂ ವಿಡಿಯೋವೊಂದು ವೈರಲ್​ ಆಗುತ್ತಿದ್ದು ನೆಟ್ಟಿಗರು ನೀವಿಬ್ಬರೂ ಡೇಟಿಂಗ್​ ಮಾಡುತ್ತಿದ್ದಾರೆ ಎಂದು ಫೋಟೋವನ್ನು ಹಂಚಿಕೊಳ್ಳುವ ಮೂಲಕ ಕೇಳುತ್ತಿದ್ದಾರೆ. ಎಲಾನ್ ಮಸ್ಕ್ ಮತ್ತು ಮೆಲೋನಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಜನರು ಊಹಿಸುತ್ತಿದ್ದಾರೆ. ಇಬ್ಬರ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಎಲಾನ್​ ಮಸ್ಕ್​​ ಪ್ರತಿಕ್ರಿಯಿಸಿದ್ದಾರೆ. ನಾನು ಮತ್ತು ಮೆಲೋಟಿ ಡೇಟಿಂಗ್​ ಮಾಡುತ್ತಿಲ್ಲ ಎಂದು ಸರಳವಾಗಿ ಉತ್ತರಿಸಿದ್ದಾರೆ. ಆದರೆ ನೆಟ್ಟಿಗರು ನೀವು ಏಕೆ ಡೇಟಿಂಗ್ ಮಾಡಬಾರದು. ನೀವು ಉತ್ತಮ ಜೋಡಿ ಎಂದು ಹೇಳಿದ್ದಾರೆ.

ಅದ್ಹಾಂಗೆ ಈ ಇಬ್ಬರು ನಾಯಕರನ್ನು ಸಾಮಾಜಿಕ ಜಾಲತಾಣದಲ್ಲಿ ಜೋಡಿ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ರೋಮ್‌ನ ಉತ್ಸವದಲ್ಲಿ ಪಾಲ್ಗೊಳ್ಳಲು ಮಸ್ಕ್​​ ಮೆಲೋನಿಯ ಆಹ್ವಾನವನ್ನು ಸ್ವೀಕರಿಸಿದ ನಂತರ ಹೀಗೆ ಹಲವು ಪೋಸ್ಟ್​ಗಳನ್ನು ಒಟ್ಟಿಗೆ ವೈರಲ್​ ಆಗಿದ್ದವು. ಅದಷ್ಟೆ ಅಲ್ಲ ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಮೆಲೋನಿ ಅವರು ಪ್ರಧಾನಿ ಮೋದಿಯವರೊಂದಿಗೆ ತೆಗೆದುಕೊಂಡ ಸೆಲ್ಫಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಸಾಕಷ್ಟು ಸದ್ದು ಮಾಡಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net