ಭಾರತದೊಂದಿಗೆ ದೊಡ್ಡ ತಪ್ಪು ಮಾಡುತ್ತಿದ್ದೇನೆ: ಟ್ರಂಪ್ ವ್ಯಾಪಾರ ನೀತಿ ವಿರುದ್ಧ ವಾಗ್ದಾಳಿ ನೆಡೆಸಿದ​ ಮಾಜಿ ಯುಎಸ್ ವಾಣಿಜ್ಯ ಕಾರ್ಯದರ್ಶಿ Gina Raimondo

Gina Raimondo
Published on

ನ್ಯೂಯಾರ್ಕ್: ಅಮೆರಿಕದಲ್ಲಿನ ಟ್ರಂಪ್ ಅಡಳಿತವು ಭಾರತದೊಂದಿಗೆ ದೊಡ್ಡ ತಪ್ಪು ಮಾಡುತ್ತಿದೆ ಎಂದು ಅಮೆರಿಕದ ಮಾಜಿ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮಂಡೋ(Gina Raimondo) ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹಾರ್ವರ್ಡ್ ಕೆನಡಿ ಶಾಲೆಯ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್‌ನಲ್ಲಿ ಮಾತನಾಡಿದ ಮಾಜಿ ಖಜಾನೆ ಕಾರ್ಯದರ್ಶಿ ಲಾರೆನ್ಸ್ ಸಮ್ಮರ್ಸ್, ಟ್ರಂಪ್ ಆಡಳಿತವು ಅಮೆರಿಕದ ಜಾಗತಿಕ ಪ್ರಭಾವವನ್ನು ದುರ್ಬಲಗೊಳಿಸುವ ಪ್ರತ್ಯೇಕತಾವಾದಿ ಮಾರ್ಗವನ್ನು ಅನುಸರಿಸುತ್ತಿದೆ. ಅಲ್ಲದೆ, ನಾವು ಭಾರತದೊಂದಿಗೆ ದೊಡ್ಡ ತಪ್ಪು ಮಾಡುತ್ತಿದ್ದೇವೆ. ಟ್ರಂಪ್ ಆಡಳಿತವು ನಮ್ಮ ಎಲ್ಲಾ ಮಿತ್ರರಾಷ್ಟ್ರಗಳನ್ನು ಕೆರಳಿಸಿದೆ. ಅಮೆರಿಕ ಮೊದಲು ಎಂಬುದು ಒಂದು ವಿಷಯವಾಗಿದೆ. ಅದರೆ ಅಮೆರಿಕ ಫಸ್ಟ್​ ಎಂಬುದು ಒಂದು ವಿನಾಶಕಾರಿ ನೀತಿಯಾಗಿದೆ ಎಂದು ಟ್ರಂಪ್​ ವಿರುದ್ಧ ಕಿಡಿಕಾರಿದ್ದಾರೆ.

ಅಮೆರಿಕದ ಪ್ರಸ್ತುತ ನಿಲುವು ನಿರ್ಣಾಯಕ ಆರ್ಥಿಕ ಮತ್ತು ವ್ಯಾಪಾರ ಪಾಲುದಾರಿಕೆಗಳನ್ನು ನಾಶಪಡಿಸುವ ಅಪಾಯ ಹೊಂದಿದೆ. ಈ ಆಡಳಿತವನ್ನು ನಾನು ಟೀಕಿಸುವ ಟಾಪ್ 20 ವಿಷಯಗಳ ಪಟ್ಟಿಯಲ್ಲಿ ನಮ್ಮ ಎಲ್ಲಾ ಮಿತ್ರರಾಷ್ಟ್ರಗಳನ್ನು ಕೆರಳಿಸುವುದು ಎಂದು ಮಾಜಿ ವಾಣಿಜ್ಯ ಕಾರ್ಯದರ್ಶಿ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ರೈಮೊಂಡೊ, ಈಗ ಜಾಗತಿಕ ಸಂಬಂಧಗಳು ಏಕಪಕ್ಷೀಯತೆಯಲ್ಲ, ಬಲವಾದ ಮೈತ್ರಿಗಳು ಬೇಕಾಗುತ್ತವೆ. ಅಲ್ಲದೆ, ಅಮೆರಿಕದ ರಾಜತಾಂತ್ರಿಕತೆಯ ಪುನರ್‌ಪರಿಶೀಲನೆಗೆ ಆಗಬೇಕು. ಯುರೋಪ್ ಅಥವಾ ಆಗ್ನೇಯ ಏಷ್ಯಾದ ಹೆಚ್ಚಿನ ಭಾಗದೊಂದಿಗೆ ಬಲವಾದ ಸಂಬಂಧಗಳಿಲ್ಲದೆ ನಾವು ಪರಿಣಾಮಕಾರಿಯಾಗಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ರೈಮೊಂಡೊ ತಿಳಿಸಿದರು. ನಾವು ಯುರೋಪಿನೊಂದಿಗೆ ಹೆಚ್ಚು ಬಲವಾದ ವಾಣಿಜ್ಯ ಸಂಬಂಧಗಳನ್ನು ಹೊಂದಬೇಕೆಂದು ನಾನು ಬಯಸುತ್ತೇನೆ. ಅದರೆ, ನಾವು ಭಾರತದೊಂದಿಗೆ ದೊಡ್ಡ ತಪ್ಪು ಮಾಡುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಆಡಳಿತವು ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿದ ನಂತರ ಯುಎಸ್​ ಮತ್ತು ಭಾರತ ನಡುವೆ ಹೆಚ್ಚುತ್ತಿರುವ ವ್ಯಾಪಾರ ಉದ್ವಿಗ್ನತೆಯ ಮಧ್ಯೆ ಈ ಹೇಳಿಕೆ ನೀಡಿದ್ದು ಕುತುಹಲ ಕೇರಳಿಸಿದೆ. ಅಮೆರಿಕದ ಪದೇಪದೆ ಆರೋಪಗಳ ಹೊರತಾಗಿಯೂ, ಭಾರತವು ರಷ್ಯಾದ ಕಚ್ಚಾ ತೈಲವನ್ನು ನಿರಂತರವಾಗಿ ಖರೀದಿಸುವುದಕ್ಕೆ ಸಂಬಂಧಿಸಿದ ಹೊಸ ಸುಂಕಗಳನ್ನು ಅಮೆರಿಕ ವಿಧಿಸಿದೆ.

ಇತರೆ ದೇಶಗಳೊಂದಿಗೆ ವ್ಯವಹಾರಗಳಲ್ಲಿ ಅಮೆರಿಕವು ದುರಹಂಕಾರ ಹೊಂದಿದೆ. ಅಲ್ಲದೆ, ವಾಷಿಂಗ್ಟನ್ ತನ್ನ ಸಂಬಂಧಗಳನ್ನು ಸರಿಪಡಿಸಿಕೊಳ್ಳುವವರೆಗೆ ಉಳಿದ ಪ್ರಪಂಚವು ಕಾಯುವುದಿಲ್ಲ ಎಂದು ರೈಮೊಂಡೊ ಎಚ್ಚರಿಸಿದ್ದಾರೆ.

ನಾವು ಈಗ ಮಾಡುತ್ತಿರುವುದು ಹೈಸ್ಮನ್ ಅನ್ನು ಪ್ರಪಂಚದ ಉಳಿದ ಭಾಗಗಳಿಗೆ ನೀಡುವುದು. ಅಮೆರಿಕ ಹಿಂತಿರುಗುವವರೆಗೆ ಕಾಯುತ್ತಾ ಕುಳಿತುಕೊಳ್ಳುತ್ತಾರೆ ಎಂದು ನಾವು ಭಾವಿಸಿದರೆ, ಭಾರತ ಹಾಗೆ ಮಾಡುವುದಿಲ್ಲ ಎಂದು ನಾನು ಚಿಂತೆ ಮಾಡುತ್ತೇನೆ. ಅಲ್ಲದೆ, ಯುರೋಪ್, ಆಫ್ರಿಕಾ, ಲ್ಯಾಟಿನ್ ಅಮೆರಿಕ, ಆಗ್ನೇಯ ಏಷ್ಯಾದಲ್ಲಿ ಚೀನಾ ಪ್ರತಿನಿತ್ಯವು ಹೇಚ್ಚುತ್ತಿದೆ. ನಾವು ಮಾತ್ರ ಎಂದು ಹೇಳುವುದು ಅಮೆರಿಕದ ದುರಹಂಕಾರವಾಗಿದೆ ಎಂದು ರೈಮೊಂಡೊ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net