ಏಕದಿನ, ಟೆಸ್ಟ್​, ಟಿ20​... ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ ನಾಯಕ​​ ಶುಭಮನ್ ಗಿಲ್ | Shubman Gill ​

ಏಕದಿನ, ಟೆಸ್ಟ್​, ಟಿ20​... ಇತಿಹಾಸ ಸೃಷ್ಟಿಸಿದ ಟೀಮ್ ಇಂಡಿಯಾ ನಾಯಕ​​ ಶುಭಮನ್ ಗಿಲ್ | Shubman Gill ​
Published on

ನವದೆಹಲಿ: ಆತಿಥೇಯ ಆಸೀಸ್​ ವಿರುದ್ಧ ಏಕದಿನ ಸರಣಿಯನ್ನು ಸೋತ ಟೀಮ್ ಇಂಡಿಯಾ, ಶುಭಮನ್ ಗಿಲ್ (Shubman Gill ​)​ ನಾಯಕತ್ವದಲ್ಲಿ ಮೂರನೇ ಪಂದ್ಯವನ್ನು ಗೆದ್ದಿತು. ಭಾರತ ತಂಡಕ್ಕೆ ಯುವ ನಾಯಕನಾಗಿ ಹಾಗೂ ಸ್ಟಾರ್ ಆರಂಭಿಕನಾಗಿ ಮೈದಾನಕ್ಕಿಳಿಯುವ ಗಿಲ್​, ಇದೀಗ ಮೂರು ಫಾರ್ಮೆಟ್​ಗಳ ಕ್ರಿಕೆಟ್​ನಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ.

ಪ್ರಸ್ತುತ, ಟೀಮ್ ಇಂಡಿಯಾದ ಟೆಸ್ಟ್ ಮತ್ತು ಏಕದಿನ ತಂಡದ ನಾಯಕ ಶುಭಮನ್ ಗಿಲ್ ಹೆಸರಿಗೆ ಈ ರೆಕಾರ್ಡ್ ಸೇರ್ಪಡೆಯಾಗಿದೆ. ವಿದೇಶಿ ನೆಲದಲ್ಲಿ ಟೆಸ್ಟ್​, ಟಿ20 ಮತ್ತು ಏಕದಿನ ಫಾರ್ಮೆಟ್​ಗಳಲ್ಲಿ ಪ್ರಥಮ ಜಯ ದಾಖಲಿಸಿದ ಮೊದಲ ಭಾರತೀಯ ಕ್ಯಾಪ್ಟನ್​ ಎಂಬ ಹೆಗ್ಗಳಿಕೆಗೆ ಇದೀಗ ಶುಭಮನ್​ ಪಾತ್ರರಾಗಿದ್ದಾರೆ. ಟಿ20 ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದ ಗಿಲ್, ಇಂಗ್ಲೆಂಡ್‌ ನಡೆದ ಟೆಸ್ಟ್‌ನಲ್ಲಿ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿದ್ದಾರೆ.

ಆಸೀಸ್​ ವಿರುದ್ಧದ 3ನೇ ಏಕದಿನ ಪಂದ್ಯವನ್ನು ಗೆದ್ದ ಬೆನ್ನಲ್ಲೇ ಗಿಲ್ ಈ ದಾಖಲೆಯನ್ನು ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಭಾರತವು ಕ್ಲೀನ್ ಸ್ವೀಪ್​ನಿಂದ ತಪ್ಪಿಸಿಕೊಂಡಿತು. ಮೊದಲ ಎರಡು ಏಕದಿನ ಪಂದ್ಯಗಳನ್ನು ಗೆದ್ದ ಆತಿಥೇಯರು, ಸರಣಿಯನ್ನು 2-1 ಅಂತರದಿಂದ ಗೆದ್ದರು. ಅಂತಿಮ ಏಕದಿನ ಪಂದ್ಯದಲ್ಲಿ, ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ಅದ್ಭುತ ಇನ್ನಿಂಗ್ಸ್​ನಿಂದ ಭಾರತ ಸುಲಭ ಜಯ ದಾಖಲಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net