ಕೊವಿಡ್​-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೊರಿಕ್ವಿನ್ ಸೇಫ್​​: ಹೊಸ ಅಧ್ಯಯನ ವರದಿ ಹೇಳಿದ್ದು ಹೀಗೆ...

Covid 19
Published on

ಕೊವಿಡ್​-19 ಚಿಕಿತ್ಸೆಗೆ ಬಳಕೆಯಾಗುತ್ತಿರುವ ಆ್ಯಂಟಿ ಮಲೇರಿಯಾ ಔಷಧಿ ಹೈಡ್ರಾಕ್ಸಿಕ್ಲೊರಿಕ್ವಿನ್​ ಬಗ್ಗೆ ಒಂದು ಧನಾತ್ಮಕ ವಿಚಾರವನ್ನು ಅಧ್ಯಯನವೊಂದು ಬಹಿರಮಗಪಡಿಸಿದೆ.

ಆಸ್ಪತ್ರೆಗಳಿಗೆ ದಾಖಲಾಗುವ ಕೊವಿಡ್​-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೊರಿಕ್ವಿನ್​ನಿಂದ ಚಿಕಿತ್ಸೆ ನೀಡುವುದರಿಂದ ಅವರು ಸಾಯುವ ಸಂಭವ ತೀರ ಕಡಿಮೆ. ಹೈಡ್ರಾಕ್ಸಿಕ್ಲೊರಿಕ್ವಿನ್ ಸಾವಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ಹೇಳಿದೆ.

ಹೈಡ್ರಾಕ್ಸಿಕ್ಲೊರಿಕ್ವಿನ್ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮೊದಲಿನಿಂದಲೂ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಅಲ್ಲದೆ ಭಾರತದಿಂದ ಆಮದು ಮಾಡಿಸಿಕೊಂಡು ಭರ್ಜರಿ ಪ್ರಚಾರ ಕೊಟ್ಟಿದ್ದಾರೆ. ಹೈಡ್ರಾಕ್ಸಿಕ್ಲೊರಿಕ್ವಿನ್ ಔಷಧಿ ಕೊವಿಡ್​-19 ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು ಎಂದು ಹೇಳುತ್ತಲೇಬಂದಿದ್ದರು. ಈ ಮಧ್ಯೆ ಕೆಲವು ಯೂನಿವರ್ಸಿಟಿಗಳು ಹೈಡ್ರಾಕ್ಸಿಕ್ಲೊರಿಕ್ವಿನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಇದರಿಂದ ರೋಗಿಗಳಲ್ಲಿ ಹೃದಯ ಸಂಬಂಧಿ ರೋಗ ಹೆಚ್ಚುತ್ತಿದೆ. ಹೃದಯಾಘಾತವಾಗಿ ಸಾಯುವ ಪ್ರಮಾಣ ಹೆಚ್ಚಾಗಿದೆ ಎಂದೂ ಹೇಳಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಪಡೆಯುವ ಮೊತ್ತ ಎಷ್ಟಿರಬಹುದು?

ಇದೀಗ ಹೆನ್ರಿ ಫಾರ್ಡ್ ಹೆಲ್ತ್​ ಸಿಸ್ಟಮ್ ನಡೆಸಿರುವ ಅಧ್ಯಯನದ ವರದಿಯನ್ನು ಪ್ರಕಟಿಸಲಾಗಿದ್ದು, ಅದರಲ್ಲಿ ಹೈಡ್ರಾಕ್ಸಿಕ್ಲೊರಿಕ್ವಿನ್​ ಕೊವಿಡ್​-19 ರೋಗಿಗಳ ಸಾವಿನ ಪ್ರಮಾಣವನ್ನು ಕಡಿತಗೊಳಿಸುತ್ತದೆ ಎಂದು ಹೇಳಿದೆ.

ಈ ಅಧ್ಯಯನ ಸುಮಾರು 2541 ಕೊವಿಡ್​-19 ರೋಗಿಗಳನ್ನು ಒಳಗೊಂಡಿತ್ತು. ಮಾರ್ಚ್​10 ರಿಂದ ಮೇ 22ರವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಒಟ್ಟು 2,541 ರೋಗಿಗಳ ಮೇಲೆ ಪ್ರಯೋಗ ನಡೆಸಲಾಗಿತ್ತು. ಒಂದಷ್ಟು ಜನರಿಗೆ ಹೈಡ್ರಾಕ್ಸಿಕ್ಲೊರಿಕ್ವಿನ್ ಚಿಕಿತ್ಸೆ ನಿಡಲಾಗಿದ್ದರೆ, ಇನ್ನೊಂದಷ್ಟು ಜನರಿಗೆ ಬೇರೆ ವಿಧದಲ್ಲಿ ಟ್ರೀಟ್​ಮೆಂಟ್​ ಕೊಡಲಾಗಿತ್ತು.

ಹೈಡ್ರಾಕ್ಸಿಕ್ಲೊರಿಕ್ವಿನ್​​ನಿಂದ ಚಿಕಿತ್ಸೆ ಪಡೆದವರಲ್ಲಿ ಸಾವಿನ ಪ್ರಮಾಣ ಶೇ.13ರಷ್ಟಿದ್ದರೆ, ಈ ಔಷಧಿಯ ಹೊರತಾಗಿ ಬೇರೆ ಚಿಕಿತ್ಸೆ ಪಡೆದವರಲ್ಲಿ ಸಾವಿನ ಪ್ರಮಾಣ ಶೇ.26ರಷ್ಟಿತ್ತು ಎಂದು ಅಧ್ಯಯನ ವರದಿ ತಿಳಿಸಿದೆ. ಅಷ್ಟೇ ಅಲ್ಲ, ಹೈಡ್ರಾಕ್ಸಿಕ್ಲೊರಿಕ್ವಿನ್ ಔಷಧಿ ತೆಗೆದುಕೊಂಡವರಲ್ಲಿ ಯಾವುದೇ ಹೃದಯಸಂಬಂಧಿ ಕಾಯಿಲೆಯಾಗಲೀ, ಸೈಡ್​ ಎಫೆಕ್ಟ್​ ಆಗಲಿ ಕಂಡು ಬಂದಿಲ್ಲ ಎಂದೂ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಫೇಸ್​ ಮಾಸ್ಕ್​, ಹ್ಯಾಂಡ್​ ಸ್ಯಾನಿಟೈಸರ್​ ಅಗತ್ಯವಸ್ತುಗಳಲ್ಲ ಎಂದ ಕೇಂದ್ರ ಸರ್ಕಾರ

ಈ ಸಂಶೋಧನೆಯನ್ನು ಹೆಚ್ಚು ವಿಶ್ಲೇಷಿಸಲಾಗಿದೆ. ಹೈಡ್ರಾಕ್ಸಿಕ್ಲೊರಿಕ್ವಿನ್​​​ನಿಂದ ಚಿಕಿತ್ಸೆ ನೀಡಿದರೆ ಮರಣ ಪ್ರಮಾಣ ತೀರ ಕಡಿಮೆ ಇರುತ್ತದೆ ಎಂದು ಹೆನ್ರಿ ಫಾರ್ಡ್​ ಹೆಲ್ತ್​ ಸಿಸ್ಟಂನ ಸಾಂಕ್ರಾಮಿಕ ಕಾಯಿಲೆ ವಿಭಾಗದ ಮುಖ್ಯಸ್ಥ ಡಾ. ಮಾರ್ಕಸ್​ ಜೆರ್ವೋಸ್​ ತಿಳಿಸಿದ್ದಾರೆ.

ಹೈಡ್ರಾಕ್ಸಿಕ್ಲೊರಿಕ್ವಿನ್ ಕೊವಿಡ್​-19 ರೋಗಿಗಳ ಜೀವ ಉಳಿಸುತ್ತದೆ ಎಂಬುದು ನಮ್ಮ ಅಧ್ಯಯನದಿಂದ ಸಾಬೀತಾಗಿದೆ ಎಂದು ಹೆನ್ರಿ ಫಾರ್ಡ್​ ಹೆಲ್ತ್​ ಸಿಸ್ಟಂನ ಸಿಇಒ ಡಾ. ಸ್ಟೀವನ್ ಕಲ್ಕಾನಿಸ್ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net