More

    ಪ್ರಿಯಾಂಕಾ ಚೋಪ್ರಾ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ಗೆ ಪಡೆಯುವ ಮೊತ್ತ ಎಷ್ಟಿರಬಹುದು?

    ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ, ಗ್ಲೋಬಲ್​ ಸ್ಟಾರ್​ ಆಗಿ ಬೆಳೆದು ನಿಂತಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿ ಕಾಣಿಸಿಕೊಂಡು ತಮ್ಮ ಕರಿಯರ್​ನ ಉನ್ನತ ಮಟ್ಟದಲ್ಲಿದ್ದಾರೆ. ಅವರ ಆದಾಯದ ಬಗ್ಗೆ ಲೆಕ್ಕ ಹಾಕುವುದಾದರೆ, ನೂರಾರು ಮೂಲಗಳು ಕಾಣಸಿಗುತ್ತವೆ. ಅದೇ ರೀತಿ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​ ಸಹ ಒಳ್ಳೇ ಸಂಪಾದನೆಯನ್ನೇ ಮಾಡಿಕೊಡುತ್ತಿದೆ. ಹೌದು, ಇನ್​ಸ್ಟಾಗ್ರಾಂನಲ್ಲಿ ಪ್ರತಿ ಒಂದು ಪೋಸ್ಟ್​ಗೆ ಯಾರಿಗೆ ಎಷ್ಟು ಸಂಭಾವನೆ ಸಿಗಲಿದೆ ಎಂಬ 100 ಸೆಲೆಬ್ರಿಟಿಗಳ ಪಟ್ಟಿ ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಆ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ ಸಹ ಸ್ಥಾನ ಪಡೆದಿದ್ದಾರೆ.

    ಇದನ್ನೂ ಓದಿ: ಅಕ್ಷಯ್​ ಕುಮಾರ್​ಗೂ ಎದುರಾಗಿತ್ತು ನೆಪೋಟಿಸಂ; ಸಿನಿಮಾ ಅವಕಾಶ ಕಿತ್ತುಕೊಂಡಿದ್ದರು ಈ ಸ್ಟಾರ್ ನಟ!

    ಅಚ್ಚರಿ ಏನೆಂದರೆ, ಪಟ್ಟಿಯಲ್ಲಿ ಭಾರತೀಯರು ಇರುವವರು ಕೇವಲ ಇಬ್ಬರೇ! ಹೌದು, ಬಾಲಿವುಡ್​ನಿಂದ ಪ್ರಿಯಾಂಕಾ ಚೋಪ್ರಾ ಮತ್ತು ಕ್ರೀಡಾಲೋಕದಿಂದ ವಿರಾಟ್​ ಕೊಹ್ಲಿ. ಇವರಿಬ್ಬರ ಪೈಕಿ ವಿರಾಟ್​ ಕೊಹ್ಲಿ ಪ್ರತಿ ಇನ್​ಸ್ಟಾಗ್ರಾಂ ಪೋಸ್ಟ್​ಗೆ 2 ಕೋಟಿ 21 ಲಕ್ಷ ಮೊತ್ತವನ್ನು ಪಡೆಯುತ್ತಿದ್ದು, 100 ಜನರ ಪಟ್ಟಿಯಲ್ಲಿ 26ನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಪ್ರಿಯಾಂಕಾ ಚೋಪ್ರಾ 2 ಕೋಟಿ 16 ಲಕ್ಷ ಮೊತ್ತ ಪಡೆಯುತ್ತಿದ್ದು, 28ನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: VIDEO/ PHOTOS: ‘ಚಿರು’ವನ್ನು ತನ್ನ ಮನೆಯಲ್ಲಿ ಜೀವಂತವಾಗಿರಿಸಿದ ಜೀವದ ಗೆಳೆಯ; ಮೇಘನಾರ ಮುಖದಲ್ಲೂ ಮೂಡಿದ ನಗು

    ಡಬ್ಲೂಡಬ್ಲೂಈ ಖ್ಯಾತಿಯ ಡ್ವೇನ್​ ಜಾನ್​ಸನ್​ ಟಾಪ್ ಸ್ಥಾನದಲ್ಲಿದ್ದು ತಲಾ ಒಂದು ಪೋಸ್ಟ್​ಗೆ 7.6 ಕೋಟಿ ಲಭಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ಆದಾಯದಲ್ಲಿ ಶೇ. 15 ಹೆಚ್ಚಿಸಿಕೊಂಡಿದ್ದಾರೆ ಡ್ವೇನ್​. (ಏಜೆನ್ಸೀಸ್​)

    ನಿಮ್ಮ ಸೋಲನ್ನೂ ಪ್ಲಾನ್​ ಮಾಡೋ ಜನರಿದ್ದಾರೆ: ರವೀನಾ ಟಂಡನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts