

ಹೈದರಾಬಾದ್: ಚಲಿಸುತ್ತಿದ್ದ ಬಸ್ನ ಹಿಂಬದಿಯ ಚಕ್ರದ ಕೆಳಗೆ ಚಕ್ರದಡಿ ತಲೆ ಇಟ್ಟು ಪ್ರಾಣವನ್ನು ಬಿಟ್ಟಿರುವ ಘಟನೆ ತೆಲಂಗಾಣದ ಹೈದರಾಬಾದ್ನ ಗಚಿಬೌಲಿಯಲ್ಲಿ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನುಪಶ್ಚಿಮ ಬಂಗಾಳ ಮೂಲದ ಬಿಸು ರಜಬ್ (40) ಎಂದು ಗುರುತಿಸಲಾಗಿದ್ದು, ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಭಾನುವಾರ ಸಂಜೆ ಬಸ್ ಕೊಂಡಾಪುರ ಕ್ರಾಸ್ರೋಡ್ಗೆ ಬಂದು ಇದ್ದಕ್ಕಿದ್ದಂತೆ ನಿಧಾನವಾಗಿ ಚಲಿಸುತ್ತಿದ್ದ ಸರ್ಕಾರಿ ಬಸ್ನಡಿ ನುಗ್ಗಿದ್ದಾನೆ.
ಚಾಲಕ ಬ್ರೇಕ್ ಹಾಕಿದರೂ ಪ್ರಯೋಜನವಾಗಲಿಲ್ಲ. ಬಸ್ಸು ಆತನ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಆತನನ್ನು ಹೊರಗೆಳೆದು ವ್ಯಕ್ತಿಯನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.ಆದರೆ ದುರದೃಷ್ಟವಶಾತ್ ಗಾಯಗೊಂಡಿದ್ದ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಪ್ರಾಣವನ್ನು ಬಿಟ್ಟಿದ್ದಾನೆ.
ಈ ಘಟನೆಯು ಸ್ಥಳದಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಈ ಕುರಿತು ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)