ಸನ್​​​ರೂಫ್​​ ಮೇಲೆ ಕಪಲ್ಸ್​​​ ಲಿಪ್​ಲಾಕ್​…ಇವರಿಗೇನು ಸೆನ್ಸ್​​​ ಇಲ್ವಾ ಎಂದು ಪ್ರಶ್ನಿಸಿದ ನೆಟ್ಟಿಗರು, ವಿಡಿಯೋ ವೈರಲ್..!

car
Published on

ಹೈದರಾಬಾದ್​​​: ಪ್ರೇಮಿಗಳು ಚಲಿಸುತ್ತಿರುವ ಕಾರಿನ ಸನ್​​ರೂಫ್​ನಿಂದ ಹೊರಬಂದು ಹೆದ್ದಾರಿಯಲ್ಲಿ ಒಬ್ಬರಿಗೊಬ್ಬರು ಲಿಪ್​​ಲಾಕ್​ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​​ ವೈರಲ್​ ಆಗಿದೆ.


ತೆಲಂಗಾಣದ ಹೈದರಾಬಾದ್‌ನಲ್ಲಿರುವ ಪಿವಿ ನರಸಿಂಹರಾವ್ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇವರಿಬ್ಬರ ವರ್ತನೆ ಭಾರೀ ಟೀಕೆಗೆ ಗುರಿಯಾಗಿದೆ.


ವಾಹನ ಚಲಾಯಿಸುವಾಗ ಕೆಲ ಕಡ್ಡಾಯ ನಿಯಮ ಪಾಲಿಸಲೇಬೇಕು. ಇಷ್ಟೇ ಅಲ್ಲ ಕಾರಿದೆ ಎಂದು ಏನುಬೇಕಾದರೂ ಮಾಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲೂ ಕೆಲ ನಿಮಯ ಪಾಲನೆ ಮಾಡಲೇಬೇಕು. ಅದರಲ್ಲೂ ಈ ಕಪಲ್​​​ ನಾವು ಎಲ್ಲಿದ್ದೇವೆ ಅನ್ನೋದನ್ನೇ ಮರೆತು ರೊಮ್ಯಾನ್ಸ್​​ ಮೂಡ್​​ಗೆ ಜಾರಿದ್ದಾರೆ.


ಇಬ್ಬರೂ ರೊಮ್ಯಾನ್ಸ್​​ ಮಾಡುತ್ತಿರುವುದು ರಸ್ತೆಯಲ್ಲಿ ಸಾಗುತ್ತಿದ್ದ ಜನರಿಗೂ ಕಾಣಿಸಿದೆ. ಸದ್ಯ ಇವರಿಬ್ಬರ ಲಿಪ್​​ಲಾಕ್​ ವಿಡಿಯೋ ವೈರಲ್​ ಆಗಿದ್ದು, ವಿಡಿಯೋ ವಿಕ್ಷಿಸಿದ ಜನರು ಇವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲೇ ಬೇಕು ಎಂದು ಕಾಮೆಂಟ್​​ ಮಾಡಿದ್ದಾರೆ.


ಈ ಘಟನೆಯು ಸಾರ್ವಜನಿಕ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಯುವಕ ಯುವತಿಗೆ ಚುಂಬಿಸಿದ್ದಾನೆ. ನಂತರ ಬೀಸುತ್ತಿರುವ ಗಾಳಿಯನ್ನು ಆನಂದಿಸಲು ಕೈ ಎತ್ತಿದ್ದಾನೆ.


ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನೆಟ್ಟಿಗರು ಕಾಮೆಂಟ್​​ ಮಾಡಿದ್ದಾರೆ. ಹೈದರಾಬಾದ್ ಸಿಟಿ ಪೊಲೀಸರು ಈ ಅಜಾಗರೂಕ ಚಾಲನೆಯ ವರ್ತನೆ ಮತ್ತು ಸಾರ್ವಜನಿಕರಿಗೆ ಉಂಟಾದ ಅನಾನುಕೂಲತೆಯನ್ನು ಪರಿಹರಿಸುತ್ತಾರೆಂದು ನಾನು ಭಾವಿಸಿದ್ದೇನೆ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.


ಎಕ್ಸ್‌ಪ್ರೆಸ್‌ವೇ ಕಾರಣ ಕಾರು ವೇವಾಗಿ ಸಾಗಿದೆ. ಈ ಜೋಡಿಯ ರೋಮ್ಯಾನ್ಸ್‌ನ್ನು ಹಿಂಭಾಗದ ವಾಹನ ಸವಾರರು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net