ಮಲಗಿದ್ದಲ್ಲೇ ಗಂಡನನ್ನು ಕೊಂದಳು ಕಿರಾತಕಿ!

murder case
Published on

ಗದಗ: ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿರುವ ಘಟನೆ ತಾಲೂಕಿನ ಕಬಲಾಯತಕಟ್ಟಿ ತಾಂಡದಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ.

ಲಕ್ಷ್ಮಣ ಪಾಂಡಪ್ಪ ಲಮಾಣಿ (39) ಮೃತ ದುರ್ದೈವಿ. ಈತನ ಪತ್ನಿ ಲಲಿತಾ ಮತ್ತು ಈಕೆಯ ಪ್ರಿಯಕರ ಸೋಮಪ್ಪ ಚೆನ್ನಪ್ಪ ಲಮಾಣಿ ಕೊಲೆ ಆರೋಪಿಗಳು. ರಾತ್ರಿ ಮನೆಯಲ್ಲಿ ಮಲಗಿದ್ದ ಲಕ್ಷ್ಮಣ ಪಾಂಡಪ್ಪ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ.

ಲಲಿತಾ ಮತ್ತು ಸೋಮಪ್ಪ ನಾಲ್ಕು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಈ ಅಕ್ರಮಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನು ಮುಗಿಸಲು ಪ್ರಿಯಕರನೊಂದಿಗೆ ಪತ್ನಿ ಸಂಚು ರೂಪಿಸಿದ್ದಳು. ಅದರಂತೆ ಲಕ್ಷ್ಮಣ ಪಾಂಡಪ್ಪ ಲಮಾಣಿಯನ್ನು ಕೊಂದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಮುಳುಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧನದಲ್ಲಿರುವ ಆರೋಪಿಗಳನ್ನು ಪೊಲೀಸರು ಶುಕ್ರವಾರ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net