ಕುಡುಕ ಗಂಡನನ್ನು ಬಿಟ್ಟು ತವರಿಗೆ ತೆರಳಿದ ಪತ್ನಿ; ಮಚ್ಚು ಹಿಡಿದುಕೊಂಡು ಬಂದ ಪತಿಯಿಂದ ಹತ್ಯೆಗೆ ಯತ್ನ!

crime news
Published on

ವಿಜಯನಗರ: ಈ ಮಹಿಳೆ ತನ್ನ ಕುಡುಕ ಗಂಡನ ಕಾಟ ತಾಳಲಾರದೇ ತವರು ಮನೆ ಸೇರಿದ್ದಳು. ಆದರೆ ಹೆಂಡತಿ ತನ್ನ ಜತೆಗೆ ಇರಬೇಕು ಎಂದು ಈ ಪತಿರಾಯ ಮಚ್ಚು ಹಿಡಿದುಕೊಂಡು ಬಂದಿದ್ದಾನೆ. ಈ ಘಟನೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬೋವಿ ಕಾಲೋನಿಯಲ್ಲಿ ನಡೆದಿದೆ.

ಕುಡುಕ ಗಂಡನ ಕಾಟ ತಾಳದೇ ತವರು ಮನೆಗೆ ಈ ಮಹಿಳೆ ಸೇರಿ ಆತನ ಜತೆ ಸಂಸಾರ ಮಾಡಲ್ಲ ಎಂದಿದ್ದಳು. ಆದರೆ ಹೆಂಡತಿಯನ್ನೇ ಕೊಲೆ ಮಾಡಲು ಮುಂದಾದ ಗಂಡ, ಮಚ್ಚು ಹಿಡಿದುಕೊಂಡು ಪತ್ನಿಯ ತವರಿಗೆ ಬಂದಿದ್ದಾರೆ. ಜೊತೆಗೆ ಸಂಸಾರ ಮಾಡಲು ಒಲ್ಲೆ ಎಂದ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಆರೋಪಿಯನ್ನು ರಮೇಶ ಎಂದು ಗುರುತಿಸಲಾಗಿದ್ದು ಈತ ಹೊಸ ಪೇಟೆ ಮೂಲದವನು ಎನ್ನಲಾಗಿದೆ. ರಮೇಶ್ ಹಗರಿಬೊಮ್ಮನಹಳ್ಳಿಯ ಬೋವಿ ಕಾಲೋನಿಯ ಯುವತಿಯನ್ನ ಮದುವೆಯಾಗಿದ್ದ.

ತವರು ಮನೆಯಲ್ಲಿದ್ದ ಪತ್ನಿಯನ್ನು ಕೊಲೆ ಮಾಡಲು‌ ಮಚ್ಚು ಸಮೇತವಾಗಿ ಈ ರಮೇಶ್ ಬಂದಿದ್ದಾನೆ. ಈ ಸಂದರ್ಭ ಮಚ್ಚು ಕಸಿದುಕೊಂಡ ಸ್ಥಳೀಯರು ಯುವತಿಯನ್ನು ರಕ್ಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಂಡ ಗಂಡನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ರಮೇಶನನ್ನು ಮಚ್ಚು ಸಮೇತವಾಗಿ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net