

Husband Missing: ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ 2017ರಲ್ಲಿ ಮಹಿಳೆಯೊಬ್ಬಳನ್ನು ಮದುವೆಯಾಗಿ ಒಂದು ವರ್ಷ ಸಂಸಾರ ಮಾಡಿ ಪತ್ನಿ ಕೈಗೆ ಒಂದು ಮಗು ಕೊಟ್ಟು, 2018ರಲ್ಲಿ ನಾಪತ್ತೆಯಾಗಿದ್ದನು. ಈಗ ಬಗ್ಗೆ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ಸದ್ಯ ಬರೋಬ್ಬರಿ 7 ವರ್ಷಗಳ ಬಳಿಕ ಅದೇ ವ್ಯಕ್ತಿ ಮತ್ತೊಬ್ಬ ಮಹಿಳೆಯೊಂದಿಗೆ ಇನ್ಸ್ಟಾಗ್ರಾಂ ರೀಲ್ಸ್ನಲ್ಲಿ ಕಾಣಿಸಿಕೊಂಡಿದ್ದಾನೆ.
ಉತ್ತರ ಪ್ರದೇಶದ ಹಾರ್ದೋಯ್‌ನ ಅಟಮೌ ಗ್ರಾಮದ ಜಿತೇಂದ್ರ ಕುಮಾರ್ 2017 ರಲ್ಲಿ ಮುರಾರ್ ನಗರದ ಶೀಲು ಎಂಬ ಮಹಿಳೆಯನ್ನು ಮದುವೆಯಾಗಿದ್ದನು. ಬಳಿಕ ಒಂದು ಮಗು ಹುಟ್ಟಿದ ಬಳಿಕ ಜಿತೇಂದ್ರ ಇದ್ದಕಿದ್ದಂತೆ ಕಾಣೆಯಾಗಿದ್ದ, 2018 ಏಪ್ರಿಲ್ನಲ್ಲಿ ಈ ಬಗ್ಗೆ ಮಿಸ್ಸಿಂಗ್ ದೂರು ದಾಖಲಾಗಿತ್ತು. ಹುಡುಕಾಟ ನಡೆಸಿದರು ಪತ್ತೆಯಾಗಿರಲಿಲ್ಲ. ಸದ್ಯ ಪತಿಯನ್ನು ಪತಿಯನ್ನು ಪತ್ತೆ ಹೆಚ್ಚಿರುವ ಪತ್ನಿ ಈ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ಪತ್ನಿ ಶೀಲು ಪತಿ ನಾಪತ್ತೆ ಆದ ಬಳಿ ತಾಯಿ ಮನೆಯಲ್ಲಿ ವಾಸಿಸುತ್ತಿದ್ದು, ಈ ಕುರಿತು ಎನ್ಡಿಟಿವಿ ಟವಿ ಜೊತೆ ಮಾತನಾಡಿರುವ ಅವರು, ತನ್ನ ಪತ್ನಿ ಕಾಣೆಯಾಗಿದ್ದರ ಹಿಂದೆ ಅವರ ಕುಟುಂಬ ಮತ್ತು ಸಂಬಂಧಿಕರ ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ನಾನು 2017 ರಲ್ಲಿ ಎಲ್ಲಾ ವಿಧಿವಿಧಾನಗಳು ಮತ್ತು ಪದ್ಧತಿಗಳ ಪ್ರಕಾರ ವಿವಾಹವಾದೆ. ನನಗೆ ಒಬ್ಬ ಮಗನಿದ್ದಾನೆ. 2018ರಲ್ಲಿ ಅವರು ನಾಪತ್ತೆಯಾಗಿದ್ದಾರು.
ನಾಪತ್ತೆಯಾದ ಬಗ್ಗೆ ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದರು. ಅದು ನನಗಾಗಲಿ, ನನ್ನ ಸಂಬಂಧಿಕರಿಗಾಗಲಿ ತಿಳಿದಿರಲಿಲ್ಲ. ಈಗ ನನ್ನ ಪತಿ ಬೇರೊಂದು ಮಹಿಳೆ ಜೊತೆ ಮದುವೆಯಾಗಿ ವಾಸಿಸುತ್ತಿದ್ದಾರೆ. ಇದು ಅವರ ಕುಟುಂಬಕ್ಕೆ ತಿಳಿದಿತ್ತು. ಆದರೆ ಅದನ್ನು ಬಹಿರಂಗ ಮಾಡಿರಲಿಲ್ಲ. ಈಗ ಬೇತೆ ಮಹಿಳೆಯೊಂದಿಗೆ ರೀಲ್ಸ್ ಮಾಡ್ತಿದ್ದು ನೋಡಿ ನನಗೆ ತಿಳಿದಿದೆ ಎಂದು ಹೇಳಿದ್ದಾರೆ.
ನನ್ನ ಕುಟುಂಬದವರು ತಮ್ಮ ಮಗನನ್ನು ಕೊಂದಿದ್ದಾರೆಂದು ಆರೋಪ ಮಾಡಿದ್ದರು. ಆದರೆ ಸತ್ಯವೆಂದರೆ ಅವರ ಕುಟುಂಬ ನನ್ನ ವಿರುದ್ಧ ಪಿತೂರಿ ನಡೆಸಿದೆ. ಅವರು ನನ್ನೊಂದಿಗೆ ಆಟವಾಡಿದರು ಮತ್ತು ಇಂದಿಗೂ ನನ್ನನ್ನು ದಾರಿ ತಪ್ಪಿಸುತ್ತಿದ್ದಾರೆ" ಎಂದು ಶೀಲು ಹೇಳಿದ್ದಾರೆ. (ಏಜೆನ್ಸೀಸ್)