

Photos: ತನ್ನ ಮಾಜಿ ಪತ್ನಿಗೆ ನಗ್ನ ಕರೆಗಳ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪದ ಮೇಲೆ ಪುರುಷ ಮತ್ತು ಮಹಿಳೆಯ ವಿರುದ್ಧ ಶುಕ್ರವಾರ ದೂರು ದಾಖಲಿಸಲಾಗಿದೆ.
ಹೈದರಾಬಾದ್ನ ಬೆಗಂಪೇಟದ ನಿವಾಸಿ ರಸೂಲ್‌ಪುರದ ಮಹಿಳೆ (39) 2005 ಲ್ಲಿ ಸೈಯದ್ ಜಾವೇದ್ (44) ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಜಾವೇದ್ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರಿಂದ ಸಂತ್ರಸ್ತೆ ಅವನಿಗೆ ವಿಚ್ಛೇದನ ನೀಡಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಕಳೆದ ತಿಂಗಳು ಜೂ.26ರಂದು, ಸೈಯದ್ ಜಾವೇದ್ ಸಂತ್ರಸ್ತೆಗೆ ಕರೆ ಮಾಡಿ, ತಾನು ಆಕೆಯ ಜತೆ ಇರುತ್ತೇನೆ ಎಂದು ಹೇಳಿದ್ದ. ಆತ ಆಗಾಗ್ಗೆ ಆಕೆಯ ಜತೆ ಮಾತನಾಡುತ್ತಿದ್ದ. ಸಂತ್ರಸ್ತೆ ಕೂಡ ಜಾವೇದ್ ನನ್ನು ನಂಬಿ ಮಾತನಾಡುತ್ತಿದ್ದಳು. ಈ ಪ್ರಕ್ರಿಯೆಯಲ್ಲಿ, ಆತ ಆಕೆಗೆ ಬಲವಂತವಾಗಿ ನಗ್ನ ಕರೆಗಳನ್ನು ಮಾಡಿ, ಕರೆಗಳ ಸ್ಕ್ರೀನ್‌ಶಾಟ್‌ಗಳನ್ನು ಉಳಿಸಿಕೊಂಡು, ಸಂತ್ರಸ್ತೆಯ ಮನೆಯ ಬಳಿ ವಾಸಿಸುವ ಯುವಕನಿಗೆ ಕಳುಹಿಸಿದ್ದ.
ಯವಕ ಈ ಮಾಹಿತಿಯನ್ನು ಸಂತ್ರಸ್ತೆಗೆ ತಿಳಿಸಿದ್ದ. ಇನ್ನು ಸಂತ್ರಸ್ತೆ ತನ್ನ ಗಂಡನ ಮನೆಗೆ ಹೋಗಿ ಅಲ್ಲೇ ಇದ್ದ ಶಬಾನಾ ಎಂಬ ಮಹಿಳೆಯ ಜತೆ ವಾಗ್ವಾದ ಮಾಡಿದ್ದಾಳೆ. ಇನ್ನು ಶಬಾನಾ ಮುಂದುವರೆದು, ಜಾವೇದ್ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವಂತೆ, ಇಲ್ಲದಿದ್ದರೆ ಎಲ್ಲರಿಗೂ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಈ ಹಿನ್ನೆಲೆ ಸಂತ್ರಸ್ತೆ ಬೇಗಂಪೇಟೆ ಪೊಲೀಸರಿಗೆ ದೂರು ನೀಡಿದರು. ಪೊಲೀಸರು ಸೈಯದ್ ಜಾವೇದ್ ಮತ್ತು ಶಬಾನಾ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್)