ಪತ್ನಿ ವಿರುದ್ಧ ಸೇಡು ತಿರಿಸಿಕೊಳ್ಳಲು ಸಂಚಾರ ನಿಯಮ ಉಲ್ಲಂಘಿಸಿದ ಪತಿ: ಇತನ ವಿಚಿತ್ರ ನಡೆಗೆ ಪೊಲೀಸರು ಶಾಕ್​! | Strange Behavior

dk-2025-02-08t210425488-67a7798c8a2ae
Published on

Strange Behavior: ಪತ್ನಿಯ ವಿರುದ್ಧ ಸೇಡು ತಿರಿಸಿಕೊಳ್ಳಲು ಪತಿ ನಡೆದುಕೊಂಡ ನಡೆ ಎಲ್ಲರಿಗೂ ವಿಚಿತ್ರವೆನಿಸುತ್ತದೆ.

ಹೌದು, ಆಕೆಯ ಹೆಸರಿಗೆ ನೊಂದಾಯಿತಗೊಂಡ ಬೈಕ್​​ ಅನ್ನು, ಗಂಡ ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಿಸಿ ಸಂಚಾರ ಉಲ್ಲಂಘನೆ ಮಾಡಿದ್ದಾನೆ. ಇದರಿಂದ ಪೊಲೀಸರು ಪತ್ನಿಯಿಂದಲೇ ದಂಡ ವಸೂಲಿ ಮಾಡಿದ್ದಾರೆ. ಈ ಘಟನೆ ಬಿಹಾರ್​ನಲ್ಲಿ ನಡೆದಿದೆ.

ಮದುವೆ ಸಂದರ್ಭದಲ್ಲಿ ಆಕೆಯ ತಂದೆ ಬೈಕ್​ವೊಂದನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.(ಆಕೆಯ ಹೆಸರಿನಲ್ಲಿ ನೊಂದಯಿಸಿ) ಹೆಂಡತಿ ವಿರುದ್ಧ ಕೇಸ್​ ಆಗಲಿ ಎಂದು ಅದೇ ಬೈಕ್​ ಅನ್ನು ಉದ್ದೇಶಪೂರಕವಾಗಿ ಸಂಚಾರ ಉಲ್ಲಂಘನೆ ಮಾಡಿದ್ದಾನೆ. ಇದರಿಂದ ಪೊಲೀಸರು ನೊಂದಾಯಿತ ಬೈಕ್​ ನಂಬರ್​ಗೆ ಕಾಲ್​ ಮಾಡಿ ಆಕೆಯ ಬಳಿ ದಂಡ ಕಟ್ಟಿಸಿಕೊಂಡಿದ್ದಾರೆ. ಅಲ್ಲದೆ, ಪದೆಪದೇ ಸಂಚಾರ ಉಲ್ಲಂಘನೆ ಮಾಡಿದರೆ ಕೇಸ್​ ಹಾಕಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹೌದು, ಮದುವೆಯಾಗಿ ಒಂದುವರೆ ತಿಂಗಳು ಕಳೆದಿದ್ದು, ದಂಪತಿ ನಡುವೆ ಜಗಳ ಹುಟ್ಟಿಕೊಂಡಿದೆ. ಅಲ್ಲಿಂದ ನಿರಂತರವಾಗಿ ಕೆಲ ದಿನಗಳಿಂದ ಮನೆಯಲ್ಲಿ ಪ್ರತಿದಿನ ಇಬ್ಬರ ನಡುವೆ ವಾಗ್ವಾದ ನಡೆಯುತ್ತಿದೆ. ಈ ಕಾರಣಕ್ಕೆ ಇದೀಗ ಇಬ್ಬರು ವಿಚ್ಛೇದನಕ್ಕೆ ಕೋರ್ಟ್​ ಮೆಟ್ಟಿಲೇರಿದ್ದಾರೆ. ಹೀಗಾಗಿ, ವಿಚ್ಛೇದನ ಸಿಟ್ಟಿಗೆ ಪತಿ ಈ ವಿಚಿತ್ರ ಕೆಲಸ ಮಾಡಿದ್ದಾನೆ.

ಪತಿಯ ಈ ವಿಚಿತ್ರ ನಡೆಗೆ ಎರಡ್ಮೂರು ಬಾರಿ ದಂಡ ಕಟ್ಟಿದ್ದಾಳೆ. ಆದರೆ, ಗಂಡನ ವಿಪರೀತ ವರ್ತನೆ ಕಂಡು(ಸಂಚಾರ ಉಲ್ಲಂಘನೆ) ಕಂಡು ಪೊಲೀಸ್​ ಮೆಟ್ಟಿಲೇರಿದ್ದಾಳೆ. ಇತನ ಕ್ರಮಕ್ಕಾಗಿ ದೂರು ದಾಖಲಿಸಿದ್ದಾಳೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net