6 ತಿಂಗಳ ಗರ್ಭಿಣಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ

court
Published on

ಬೆಂಗಳೂರು : ಗರ್ಭೀಣಿ ಪತ್ನಿಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ಮತ್ತು 2 ಸಾವಿರ ರೂ. ದಂಡ ವಿಧಿಸಿ 71ನೇ ಸಿಟಿ ಸಿವಿಲ್ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಬನಶಂಕರಿ 2ನೇ ಹಂತ ಕಾವೇರಿನಗರ ನ್ಯೂ ಕಾಲನಿ ನಿವಾಸಿ ಅಪ್ರೋಜ್ ಶಿಕ್ಷೆಗೆ ಒಳಗಾದ ಅಪರಾಧಿ. 2013ರ ಏಪ್ರಿಲ್ 22ರಂದು ಪತ್ನಿ ಶಬ್ಬಿನ್ ತಾಜ್ ಎಂಬಾಕೆ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ಬನಶಂಕರಿ ಪೊಲೀಸರು ಅಪ್ರೋಜ್‌ನನ್ನು ಬಂಧಿಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು.ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯಾವತಿ, ವಾದ ಮಂಡಿಸಿದ್ದರು. ನ್ಯಾಯಾಧೀಶರಾದ ಎನ್. ಬಾಲಚಂದ್ರ ಭಟ್, ವಾದ-ಪ್ರತಿವಾದ ಆಲಿಸಿ ಶಿಕ್ಷೆ ಪ್ರಕಟಿಸಿದ್ದಾರೆ.

2022ರ ಮೇ 4ರಂದು ಅಪ್ರೋಜ್ ಮತ್ತು ಶಬ್ಬಿನ್ ತಾಜ್ ಮದುವೆ ಆಗಿದ್ದು, ಕಾವೇರಿನಗರದ ನ್ಯೂ ಕಾಲನಿಯಲ್ಲ ನೆಲೆಸಿದ್ದರು. ಮದ್ಯ ವ್ಯಸನಿಯಾಗಿದ್ದ ಅಪರಾಧಿ, ಪ್ರತಿದಿನ ಕುಡಿದು ಬಂದು ಜಗಳ ಮಾಡುತ್ತಿದ್ದ. 2013ರ ಏಪ್ರಿಲ್ 22ರಂದು ಬೆಳಗ್ಗೆ 5 ಗಂಟೆಯಲ್ಲಿ ಮನೆಯಲ್ಲಿ ಪತ್ನಿಯ ಜತೆ ಜಗಳ ತೆಗೆದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಓಡಿ ಹೋಗಿದ್ದ. ಈ ಸಮಯದಲ್ಲಿ ಈಕೆ 6 ತಿಂಗಳ ಗರ್ಭೀಣಿ ಆಗಿದ್ದಳು. ಇದನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net