50 ಸಾವಿರ ರೂ. ಸಾಲ ತೀರಿಸಲು ಪತ್ನಿಯನ್ನೇ ಮಾರಿದ ಗಂಡ! Debt

dk - 2025-06-24T182028.398
Published on

50 ಸಾವಿರ ರೂ. ಸಾಲ ತೀರಿಸಲು ಹೆಂಡತಿಯನ್ನು ಪತಿ ಮಾರಿದ ಘಟನೆ ಮಧ್ಯಪ್ರದೇಶದ ಥಾರ್​ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ದೂರಿನ ಆಧಾರದ ಮೇಲೆ ಇಂದೋರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಅದನ್ನು 'ಶೂನ್ಯ'(ಅಪರಾಧ ನಡೆದ ಸ್ಥಳ ಪರಿಗಣಿಸದೆ, ಯಾವುದೇ ಪೊಲೀಸ್​​ಠಾಣೆಯಲ್ಲಿ ಪ್ರಕರಣ ದಾಖಲು) ಎಫ್‌ಐಆರ್ ಎಂದು ದಾಖಲಿಸಿ, ಕ್ರಮಕ್ಕಾಗಿ ಧಾರ್ ಪೊಲೀಸರಿಗೆ ಕಳುಹಿಸಿದ್ದಾರೆ.

ಮಹಿಳೆ ತನ್ನ ಪತಿ ಜೂಜಾಟ ಆಡುತ್ತಿದ್ದಾನೆ. ಈ ಅಭ್ಯಾಸದಿಂದಾಗಿ ಅವನ ಸಾಲ ಹೆಚ್ಚುತ್ತಲೇ ಇತ್ತು. ಹೀಗಾಗಿ, 50,000 ರೂ. ಸಾಲ ತೀರಿಸಲು ನನ್ನ ಗಂಡ ನನ್ನನ್ನು ತನ್ನ ಸ್ನೇಹಿತನಿಗೆ "ಮಾರಿದ್ದಾನೆ" ಎಂದು ಆರೋಪಿಸಲಾಗಿದ್ದು, ನಂತರ ಸ್ನೇಹಿತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಧಾರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಗೀತೇಶ್ ಕುಮಾರ್ ಗರ್ಗ್ ಮಾತನಾಡಿ, "ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಸಂತ್ರಸ್ತೆಯ ಹೇಳಿಕೆಯನ್ನು ಇಂದೋರ್‌ನಲ್ಲಿ ದಾಖಲಿಸಲಾಗುವುದು" ಎಂದು ಹೇಳಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net