

ಬೆಂಗಳೂರು: ಪತ್ನಿಯೊಂದಿಗೆ ಜಗಳವಾಡಿ ಒಂದು ವರ್ಷದಿಂದ ದೂರವಿರುವ ಪತಿ, ತನ್ನ ಪತ್ನಿಯ ಹೆಸರಿನಲ್ಲಿ ನಕಲಿ ೇಸ್‌ಬುಕ್ ಖಾತೆ ತೆರೆದು ಕಾಲ್‌ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಪತ್ನಿಯ ೆಟೊ ಮತ್ತು ಮೊಬೈಲ್ ಸಂಖ್ಯೆ ಹಾಕಿ ವಿಕೃತಿ ಮೆರೆದಿದ್ದಾನೆ.
ಲಗ್ಗೆರೆ ಬಳಿಯ ರಾಜೀವ್‌ಗಾಂಧಿ ನಗರದ ಸತ್ಯನಾರಾಯಣರೆಡ್ಡಿ ಎಂಬಾತ ಈ ಕೃತ್ಯ ಎಸಗಿದ್ದು, ನೊಂದ ಮಹಿಳೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿಯಾದ ಸತ್ಯನಾರಾಯಣರೆಡ್ಡಿ ಅವರು ೨೦೧೯ರ ಆಗಸ್ಟ್‌ನಲ್ಲಿ ಮದುವೆಯಾಗಿದ್ದರು. ನಂತರ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು.
ಸತ್ಯನಾರಾಯಣರೆಡ್ಡಿ, ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಅವರ ಪತ್ನಿಯು ಸತ್ಯನಾರಾಯಣರೆಡ್ಡಿ ವಿರುದ್ಧ ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಪತ್ನಿಯಿಂದ ದೂರವಾದ ಸತ್ಯನಾರಾಯಣರೆಡ್ಡಿ, ಕಂಪನಿಯ ಕೆಲಸದ ನಿಮಿತ್ತ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿ ಇದ್ದುಕೊಂಡೇ ಪತ್ನಿಯ ಹೆಸರಿನಲ್ಲಿ ನಕಲಿ ೇಸ್‌ಬುಕ್ ಖಾತೆ ತೆರೆದಿದ್ದಾರೆ. ಅಲ್ಲದೆ, ಆ ಖಾತೆಯಲ್ಲಿ ಪತ್ನಿಯ ೆಟೊಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಹಾಕಿ ಕಾಲ್‌ಗರ್ಲ್ ಬೇಕಿದ್ದರೆ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಎಂದು ಪೋಸ್ಟ್ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಸತ್ಯನಾರಾಯಣರೆಡ್ಡಿ, ನಕಲಿ ೇಸ್‌ಬುಕ್ ಖಾತೆಯಲ್ಲಿ ಪತ್ನಿಯ ತಂದೆ ಮತ್ತು ಸ್ನೇಹಿತರ ಮೊಬೈಲ್ ಸಂಖ್ಯೆಗಳನ್ನು ಸಹ ಹಾಕಿದ್ದಾರೆ. ಅಲ್ಲದೆ, ಕೆಲ ಪೋರ್ನ್ ವೆಬ್‌ಸೈಟ್‌ಗಳಲ್ಲೂ ಪತ್ನಿಯ ಮೊಬೈಲ್ ಸಂಖ್ಯೆಯನ್ನು ಹಾಕಿದ್ದಾರೆ. ಇದರಿಂದಾಗಿ ಸಂತ್ರಸ್ತೆ, ಆಕೆಯ ತಂದೆ ಮತ್ತು ಸ್ನೇಹಿತರ ಮೊಬೈಲ್ ಸಂಖ್ಯೆಗೆ ಪ್ರತಿನಿತ್ಯ ನೂರಾರು ಕರೆಗಳು ಹಾಗೂ ವಾಟ್ಸಾಪ್ ಸಂದೇಶಗಳು ಬರುತ್ತಿವೆ. ಇದರಿಂದ ಮಾನಸಿಕವಾಗಿ ಸಾಕಷ್ಟು ಕಿರುಕುಳ ಅನುಭವಿಸಿರುವ ಸಂತ್ರಸ್ತೆಯು, ಪತಿ ಸತ್ಯನಾರಾಯಣರೆಡ್ಡಿ ವಿರುದ್ಧ ದೂರು ದಾಖಲಿಸಿ, ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಂಪತ್ಯ ಕಲಹವೇ ಘಟನೆಗೆ ಮುಖ್ಯ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸತ್ಯನಾರಾಯಣರೆಡ್ಡಿ, ಪತ್ನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಪತ್ನಿಯ ೆಟೊ ಮತ್ತು ಮೊಬೈಲ್ ಸಂಖ್ಯೆ ಹಾಕಿ ವಿಕೃತಿ ಮೆರೆದಿದ್ದಾರೆ. ಮಾಹಿತಿ ತಂತ್ರಜ್ಞಾನ ದುರ್ಬಳಕೆ ಕಾಯಿದೆಯಡಿ ಸತ್ಯನಾರಾಯಣರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.