ಪ್ರತಿನಿತ್ಯ ಕಲರ್​ ಕಲರ್​​ ಬಿಂದಿ ಇಡಲು ಬಿಡದ ಪತಿ; Divorce ಕೋರಿ ಕೋರ್ಟ್​ ಮೆಟ್ಟಿಲೇರಿದ ಪತ್ನಿ

Bindi
Published on

ಆಗ್ರಾ: ತನ್ನ ಪತಿ ಪ್ರತಿನಿತ್ಯ ವಿಧವಿಧವಾದ ಬಿಂದಿಗಳನ್ನು ಇಟ್ಟುಕೊಳ್ಳಲು ಬಿಡಲಿಲ್ಲವೆಂದು ಆರೋಪಿಸಿ ಮಹಿಳೆಯೊಬ್ಬಳು ವಿಚ್ಛೇದನ (Divorce) ಕೋರಿ ಕೋರ್ಟ್ ಮೆಟ್ಟಿಲೇರಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆಯು ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ಮಹಿಳೆಯ ನಡೆ ವ್ಯಾಪಕ ಟೀಕೆಗೆ ಗುರಿಯಾಗಿದೆ.

ವರದಿಗಳ ಪ್ರಕಾರ, ಮಹಿಳೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗಿಲ್ಲ ಎಂದು ಹೇಳಲಾಗುತ್ತಿದೆ. ಇದರ ನಡುವೆ ಮಹಿಳೆಯು ಪ್ರತಿನಿತ್ಯ ಹೊಸ ಡಿಸೈನ್​ ಬಿಂದಿಯನ್ನು (Bindi) ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿದ್ದು, ತನ್ನ ಪತಿಗೆ ಪ್ರತಿನಿತ್ಯ ಹೊಸ ಡಿಸೈನ್​ ಬಿಂದಿಯನ್ನು ತಂದುಕೊಡುವಂತೆ ಹಠ ಹಿಡಿಯುತ್ತಿದ್ದಳು. ಈ ವಿಚಾರವಾಗಿ ದಂಪತಿಗಳ ನಡುವೆ ಅನೇಕ ಬಾರಿ ಗಲಾಟೆಯಾಗಿದ್ದು, ಪ್ರಕರಣ ಪೊಲೀಸ್​ ಠಾಣೆ ಮೆಟ್ಟಿಲೇರಿತ್ತು.

Bindis

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ಪೊಲೀಸರು ಪತಿ-ಪತ್ನಿಯ ವಾದವನ್ನು ಆಲಿಸಿ ಬಳಿಕ ಹತ್ತಿರದ ಕುಟುಂಬ ಸಲಹಾ ಸಮಾಲೋಚನ ಕ್ರೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಅದಾಗ್ಯೂ, ದಂಪತಿಗಳು ಮತ್ತೊಮ್ಮೆ ಕಿತ್ತಾಡಿಕೊಂಡಿದ್ದು, ಮಹಿಳೆಯು ವಿಚ್ಛೇದನ (Divorce) ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದು, ಮಹಿಳೆಯ ನಡೆ ಚರ್ಚಾಸ್ಪದವಾಗಿದೆ.

ಈ ಬಗ್ಗೆ ಮಾತನಾಡಿರುವ ಆಪ್ತಸಮಾಲೋಚಕ ಡಾ.ಅಮಿತ್ ಗೌಡ್, ಮಹಿಳೆ ದಿನಕ್ಕೆ ಒಂದರಂತೆ ತಿಂಗಳಿಗೆ 30-35 ಹೊಸ ಡಿಸೈನ್​ ಬಿಂದಿಗಳನ್ನು ತರುವಂತೆ ಪೀಡಿಸುತ್ತಿದ್ದಳು. ಈ ವಿಚಾರವಾಗಿ ದಂಪತಿಗಳು ಅನೇಕ ಬಾರಿ ಕಿತ್ತಾಡಿಕೊಂಡಿದ್ದು, ದಂಪತಿಗಳೊಟ್ಟಿಗೆ ಒಮ್ಮೆ ಆಪ್ತ ಸಮಾಲೋಚನೆ ನಡೆಸಲಾಗಿತ್ತು. ಇದೀಗ ಮಹಿಳೆ ವಿಚ್ಛೇದನ (Divorce) ನೀಡುವಂತೆ ಕೋರ್ಟ್ ಮೆಟ್ಟಿಲೇರಿದ್ದು, ಈ ರೀತಿಯ ಪ್ರಕರಣ ಆಗ್ರಾದಲ್ಲಿ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಮಹಿಳೆಯೊಬ್ಬರು ತನಗೆ ಪತಿ ಮೊಮೋಸ್​ ಕೊಡಸಲಿಲ್ಲವೆಂದು ವಿಚ್ಛೇದನ ಕೋರಿದ್ದರು. ಆಪ್ತ ಸಮಾಲೋಚನೆ ಬಳಿಕ ಮಹಿಳೆ ಡಿವೋರ್ಸ್ ಅರ್ಜಿಯನ್ನು ಹಿಂಪಡೆದರು ಎಂದು ತಿಳಿಸಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net