

3 ಕೋಟಿ ರೂ, ಹಣ ಬಂದ ತಕ್ಷಣ ಹೊಸ ಜೀವನದ ಬದಲಾವಣೆಯನ್ನು ಹರಿಸಿ ಹೆಂಡತಿಯನ್ನು ಬಿಟ್ಟು ಗಂಡನೊಬ್ಬ ತನ್ನ ತಂದೆಯ ಊರಿಗೆ ಹೋದ. ಆದರೆ, ಪಟ್ಟಣ್ಣದಲ್ಲಿ ಒಬ್ಬಂಟಿಯಾಗಿದ್ದ ಪತ್ನಿ ಕೆಲ ವರ್ಷಗಳ ಬಳಿಕ ಬಿಟ್ಟು ಹೋದ ಗಂಡನಿಗೆ ಜೀವನಪರ್ಯಂತ ನೆನಪಿಲ್ಲಿಟ್ಟುಕೊಳ್ಳಬೇಕಾದ ಪಾಠವೊಂದನ್ನು ಕಲಿಸಿದ್ದಾಳೆ. ಇದು ಅವರಿಗೆ ಮಾತ್ರ ಸೀಮಿತವಲ್ಲ. ಜಗತ್ತಿನ ಎಲ್ಲ ಗಂಡದಿರುಮ ಕೂಡ ಕಲಿಯಬೇಕಾದ ಪಾಠವಾಗಿದೆ.
ಹೌದು, ಇದು ಕಥೆಯಲ್ಲ.. ಜೀವನ. ಈ ಘಟನೆ ಬೆಳಕಿಗೆ ಬಂದಿರೋದು ದೂರದ ಜಪಾನ್ನಲ್ಲಿ. ಈ ಘಟನೆ ಬಗ್ಗೆ ದಿ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಯಮಡಾ ಮತ್ತು ಕೀಕೊ ದಂಪತಿಗಳು ಬಹಳ ವರ್ಷಗಳಿಂದ ಒಟ್ಟಿಗೆ ವಾಸ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರಾಮದಾಯಕ ಜೀವನ.. ಹೀಗೆ ಎಲ್ಲವೂ ಚೆನ್ನಾಗಿ ನಡೆಯುತ್ತಿತ್ತು. ಆದರೆ, ಯಮಡಾಗೆ 60 ವರ್ಷ ತುಂಬಿ ನಿವೃತ್ತಿ ಬಂದ ತಕ್ಷಣ, ಅವರು ಈಗ ತಮ್ಮ ಉಳಿದ ಜೀವನವನ್ನು ಹಳ್ಳಿಯಲ್ಲಿ ಕಳೆಯಬೇಕೆಂದು ನಿರ್ಧರಿಸಿದರು.
ಪತ್ನಿ ಕೀಕೊಗೆ ಈ ಐಡಿಯಾ ಇಷ್ಟವಾಗಲಿಲ್ಲ. ನಗರದ ವೈಭವ ಮತ್ತು ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿದ್ದ ಕೀಕೊ, ಹಳ್ಳಿಯ ಸರಳತೆ ಮತ್ತು ಏಕಾಂತತೆಗೆ ತನ್ನನ್ನು ಸೀಮಿತಗೊಳಿಸಲು ಬಯಸಲಿಲ್ಲ. ಗಂಡ ಮತ್ತು ಹೆಂಡತಿಯ ನಡುವಿನ ಸಂಘರ್ಷ ಹೆಚ್ಚಾಯಿತು ಮತ್ತು ಅಂತಿಮವಾಗಿ ಇಬ್ಬರೂ ಜಪಾನ್‌ನ ಪ್ರಸಿದ್ಧ ಪರಿಕಲ್ಪನೆ 'ಸೋತ್ಸುಕೋನೆ' ಅಂದರೆ, ಮದುವೆಯನ್ನು ಮುರಿಯದೆ ಪ್ರತ್ಯೇಕವಾಗಿ ವಾಸಿಸುವ ಜೀವನ ಅಳವಡಿಸಿಕೊಂಡರು.
ಯಮಡಾ ನಿವೃತ್ತಿಯ ನಂತರ ಪಡೆದಿದ್ದ 50 ಮಿಲಿಯನ್ ಯೆನ್ (ಸುಮಾರು 3 ಕೋಟಿ ರೂ.) ತೆಗೆದುಕೊಂಡು ತನ್ನ ಹಳ್ಳಿಗೆ ಮರಳಿದರು. ಅವರು ತಮ್ಮ ಪೂರ್ವಜರ ಮನೆಯನ್ನು ದುರಸ್ತಿ ಮಾಡಿಸಿ, ಹಣವನ್ನು ಖರ್ಚು ಮಾಡಿ ಈಗ ತಮ್ಮ ಜೀವನವನ್ನು ಆನಂದಿಸಬಹುದೆಂದು ಭಾವಿಸಿದರು. ಆದರೆ ವಾಸ್ತವವೇ ಬೇರೆಯಾಗಿತ್ತು. ಮನೆ ಎಂದರೆ ಕೇವಲ ನಾಲ್ಕು ಗೋಡೆ ಅಲ್ಲ. ಎಲ್ಲರೂ ಇದ್ದರೆ ಮಾತ್ರ ಅದು ಮನೆ ಕುಟುಂಬ ಎಂದು ಯಮಡಾಗೆ ಅರಿವಾಯಿತು.
ಇತ್ತ ಏತನ್ಮತೆ ಕೀಕೊಗೆ ಅದೃಷ್ಟ ಬದಲಾಯಿತು. ಟೋಕಿಯೊದಲ್ಲಿ ಸಣ್ಣದಾಗಿ ಆರಂಭಿಸಿದ ಬಿಸಿನೆಸ್ ಕೀಕೊ ಅವರ ಕೈ ಹಿಡಿದಿತ್ತು. ಆಗಾಗ್ಗೆ, ಸಾಮಾಜಿಕ ಮಾಧ್ಯಮದಲ್ಲಿಯೂ ಬರಲು ಪ್ರಾರಂಭಿಸಿದಳು. ಇದರಿಂದ ನಿಧಾನವಾಗಿ ಅವಳ ಯುಶಸ್ಸಿನಿಂದ ಅವಳ ಜೀವನವೇ ಬದಲಾಯಿತು. ಅಲ್ಲಿಗೆ ಗಂಡ ಯಮಡಾಗೆ ತನ್ನ ತಪ್ಪಿನ ಅರಿವಾಗಿತ್ತು.
ನಾನು ಇಲ್ಲದಿದ್ದರೂ ಅವರ ಸಂತೋಷವಾಗಿದ್ದಾರೆ ಎಂದು ಯಮಡಾ ಹಳ್ಳಿ ಊರಿನಲ್ಲಿ ಸಂಬಂಧಿಕರಿಗೆ ಹೇಳುತ್ತಿದ್ದರು. ಆದರೆ, ಕಾಲ ಬದಲಾಗಿ ಹೋಗಿತ್ತು. ಯಮಡಾ ಈಗ ತನ್ನ ನಿರ್ಧಾರ ತಪ್ಪು ಎಂದು ಒಪ್ಪಿಕೊಂಡಿದ್ದಾನೆ. ಆದರೆ, ತಡವಾದ ಬುದ್ಧಿವಂತಿಕೆಯು ಸಂಬಂಧದಲ್ಲಿನ ಬಿರುಕುಗಳನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ. ಅವನ ಮಕ್ಕಳೊಂದಿಗಿನ ಅವನ ಸಂಬಂಧವೂ ಬಹುತೇಕ ಮುರಿದುಹೋಗಿದೆ. ಈಗ ಅವನ ಬಳಿ ಇರುವುದು ಹಣ, ಒಂಟಿತನ ಮತ್ತು ವಿಷಾದ ಮಾತ್ರ.(ಏಜೆನ್ಸೀಸ್)