

Baseball Bat: ಹೆಡ್ ಕಾನ್ಸ್ಟೇಬಲ್ ಹುದ್ದೆಯಲ್ಲಿದ್ದ ಮಹಿಳೆಯನ್ನು ಆಕೆಯ ಪತಿಯೇ ಬೇಸ್‌ಬಾಲ್ ಬ್ಯಾಟ್ನಿಂದ ಹೊಡೆದು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಸವಿತಾ ಸಾಕೇತ್ ಮೃತೆ ಎಂದು ಗುರುತಿಲಾಗಿದ್ದು, ಭಾನುವಾರ ರಾತ್ರಿ ಊಟ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸವಿತಾ ಮತ್ತು ಅವರ ಪತಿ ಆರೋಪಿ ವೀರೇಂದ್ರ ಸಾಕೇತ್ ಸಿಧಿ ಜಿಲ್ಲೆಯ ಸರ್ಕಾರಿ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಈ ಗಲಾಟೆಯ ನಡುವೆ, ವೀರೇಂದ್ರ ಬೇಸ್‌ಬಾಲ್ ಬ್ಯಾಟ್ ಎತ್ತಿಕೊಂಡು ತನ್ನ ಹೆಂಡತಿಗೆ ಪದೇಪದೆ ಹೊಡೆದಿದ್ದರಿಂದ ಆಕೆಯ ಸಾವು ಸಂಭವಿಸಿದೆ ಎಂದು ಸ್ಥಳೀಯರ ಮಾಹತಿ ಪ್ರಕಾರ ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆದರೆ, ಕೊಲೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲವಾದರೂ ಪೊಲೀಸ್ ತನಿಖೆ ಬಳಿಕ ಹೊರ ಬರಲಿದೆ.(ಏಜೆನ್ಸೀಸ್)