

Google: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅದರಲ್ಲೂ ಬಹಳ ವಿಶೇಷವಾಗಿ ಇನ್ಸ್ಟಾಗ್ರಾಮ್ನಲ್ಲಿ ಹೊಸ ಟ್ರೆಂಡ್ವೊಂದು ಶುರುವಾಗಿದೆ.
ಹೌದು, ಅದು ಎಲ್ಲರೂ ಕೂಡ ತಮ್ಮ-ತಮ್ಮ ಮೊಬೈಲ್ಗಳಲ್ಲಿ ಜೆಮಿನಿ ನ್ಯಾನೋ ಹಾಗೂ AI ಸಹಾಯದ ಮೂಲಕ ವಿಂಟೇಜ್ ಸೀರೆ ಫೋಟೋ ಎಡಿಟ್ ಮಾಡಲು ಶುರು ಮಾಡಿದ್ದಾರೆ. 90ರ ದಶಕದ ಹಳೆಯ ಕನ್ನಡ ಚಲನಚಿತ್ರಗಳ ಪೋಸ್ಟರ್ಗಳಂತೆ ಈ ಫೋಟೋಗಳು ಕಾಣಿಸುತ್ತವೆ. ಈ ಅಪ್ಲಿಕೇಷನ್ನಲ್ಲಿ ಫೋಟೋ ಆಪ್ಲೋಡ್ ಮಾಡಿದರೆ ಸಾಕು ನಿಮ್ಮ ಫೋಟೋಗಳನ್ನು ಹಳೆ ಸಿನಿಮಾಹ ಶೈಲಿಯಲ್ಲಿ ಬದಲಾಯಿಸಿ ಕೊಡುತ್ತದೆ. ಹಾಗಿದ್ರೆ ಇದು ಎಷ್ಟು ಸುರಕ್ಷಿತ? ತಜ್ಞರು ಹೇಳೊದೇನು? ಇಲ್ಲಿದೆ ಸಂಪೂರ್ಣ ಮಾಹಿತಿ..
ಇದು ಏಕವ್ಯಕ್ತಿ ಫೋಟೋಗಳನ್ನು AI ಸಹಾಯದಿಂದ ರೆಟ್ರೊ ಶೈಲಿಯ ಪೋಸ್ಟರ್ಗಳಾಗಿ ಪರಿವರ್ತಿಸುತ್ತದೆ. ಕಪ್ಪು-ಬಿಳುಪಿನ ಶೇಡ್ಗಳು ಮತ್ತು ಕ್ಲಾಸಿಕ್ ಬಾಲಿವುಡ್ ಸೌಂದರ್ಯವನ್ನು ಅನುಕರಿಸಲು ಪ್ರಯತ್ನಿಸುತ್ತವೆ. ಗೂಗಲ್ನ ಜೆಮಿನಿ (Gemini) ಹಾಗೂ ಚಾಟ್ಜಿಪಿಟಿ (ChatGPT) ಯಂತಹ AI ಅಪ್ಲಿಕೇಷನ್ಗಳಲ್ಲಿ ಈ ಟ್ರೆಂಡ್ಅನ್ನು ಸೃಷ್ಟಿಸಬಹುದಾಗಿದೆ.
AI ರಚಿತ ವಿಷಯಕ್ಕಾಗಿ ಗೂಗಲ್ ವಾಟರ್ ಮಾರ್ಕ್ಗಳನ್ನು ಆಳವಡಿಸಿದರೆ, ಡೇಟಾ ದುರುಪಯೋಗ ಮತ್ತು ವಂಚನೆಗಳು ಸೇರಿದಂತೆ ಗೌಪ್ಯತೆ ಹಾಗೂ ಭದ್ರತಾ ಅಪಾಯಗಳ ಬಗ್ಗೆ ಇದೀಗ ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೆ, ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಮತ್ತು ಅನಧಿಕೃತ ಆ್ಯಪ್ಗಳನ್ನು ಬಳಸುವಾಗ ಭದ್ರತೆ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಜೆಮಿನಿ ಬಳಸಿ ರಚಿಸಲಾದ ಚಿತ್ರಗಳಲ್ಲಿ ಸಿಂಥ್ ಐಡಿ ಎಂದು ಕರೆಯಲ್ಪಡುವ ಅದೃಶ್ಯ ವಾಟರ್ ಮಾರ್ಕ್ ಅನ್ನು ಹೊಂದಿರುತ್ತದೆ ಎಂದು ಗೂಗಲ್ ಹೇಳುತ್ತದೆ. ಅಂದರೆ, AI ಯಿಂದ ರಚಿತವೆಂದು ಸ್ಪಷ್ಟತೆಯನ್ನು ಗುರುತಿಸಲು ಅದೃಶ್ಯ ಸಿಂಥ್ ಐಡಿ ಒಳಗೊಂಡಿರುತ್ತದೆ, ಈಗಾಗಿ ನೀವು ಫೋಟೋಗಳನ್ನು ಅತ್ಮವಿಶ್ವಾಸದಿಂದ ನಿರ್ಮಿಸಿ ಎಂದು ಗೂಗಲ್ ಸ್ಪಷ್ಟಪಡಿಸುತ್ತದೆ. ಆದರೆ, ಈವರೆಗೂ ಸಿಂಥ್ ಐಡಿ ಪತ್ತೆ ಸಾಧನಗಳು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ. ಹೀಗಾಗಿ, ವಾಟರ್ ಮಾರ್ಕ್ಗಳನ್ನು ತಿರುಚಬಹುದು ಎಂದು ತಜ್ಞರು ಹೇಳಿದ್ದಾರೆ.
ವೈರ್ಡ್ನ ವರದಿಯ ಪ್ರಕಾರ, "ವಾಟರ್ಮಾರ್ಕಿಂಗ್ ಮೊದಲಿಗೆ ಒಂದು ಉದಾತ್ತ ಮತ್ತು ಭರವಸೆಯ ಪರಿಹಾರದಂತೆ ತೋರುತ್ತದೆ. ಆದರೆ, ಅದರ ನೈಜ-ಸ್ಪರೂಪ ಪ್ರಾರಂಭದಿಂದಲೇ ವಿಫಲಗೊಳ್ಳುತ್ತವೆ. ಅವುಗಳನ್ನು ಸುಲಭವಾಗಿ ನಕಲಿ ಮಾಡಬಹುದು, ತೆಗೆದುಹಾಕಬಹುದು ಅಥವಾ ನಿರ್ಲಕ್ಷಿಸಬಹುದು.”
ಭಾರತೀಯ ಪೊಲೀಸ್ ಸೇವಾ ಅಧಿಕಾರಿ ವಿ.ಸಿ. ಸಜ್ಜನರ್ ಕೂಡ ನ್ಯಾನೋ AI ಪ್ರವೃತ್ತಿಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ತಮ್ಮ ಎಕ್ಸ್ ಪೋಸ್ಟ್ನಲ್ಲಿ ಹಂಚಿಕೊಂಡಿರುವ ಸಜ್ಜನರ್ "ಇಂಟರ್ನೆಟ್ನಲ್ಲಿ ಟ್ರೆಂಡಿಂಗ್ ವಿಷಯಗಳೊಂದಿಗೆ ಯಾವಾಗಲೂ ಜಾಗರೂಕರಾಗಿರಿ! 'ನ್ಯಾನೋ AI' ಕ್ರೇಜ್ನ ಬಲೆಗೆ ಬೀಳುವುದು ಅಪಾಯಕಾರಿ. ನೀವು -ವೈಯಕ್ತಿಕ ಮಾಹಿತಿಯನ್ನು ಆನ್ಲೈನ್ನಲ್ಲಿ ಹಂಚಿಕೊಂಡರೆ, ವಂಚನೆಗಳು ಸಂಭವಿಸುವುದು ಖಚಿತ. ಕೇವಲ ಒಂದು ಕ್ಲಿಕ್ನಲ್ಲಿ, ನಿಮ್ಮ ಬ್ಯಾಂಕ್ ಖಾತೆಗಳಲ್ಲಿನ ಹಣವು ಅಪರಾಧಿಗಳ ಕೈಗೆ ಸೇರಬಹುದು" ಎಂದಿದ್ದಾರೆ.(ಏಜೆನ್ಸೀಸ್)