3 ವರ್ಷವಾದರೂ ಪತಿ ನನ್ನೊಂದಿಗೆ ಸೇರುತ್ತಿಲ್ಲ; ನ್ಯಾಯ ಕೋರಿ ಠಾಣೆ ಮೆಟ್ಟಿಲೇರಿದ ಮಹಿಳಾ ಸಾಫ್ಟ್‌ವೇರ್ ಉದ್ಯೋಗಿ..!

PS
Published on

ಬೆಂಗಳೂರು: ಮದುವೆಯಾಗಿ 3 ವರ್ಷವಾದರೂ ನನ್ನಿಂದ ದೂರು ಇರುವ ನನ್ನ ಗಂಡ ಸಲಿಂಗಿ ಎಂಬ ವಿಷಯ ಮುಚ್ಚಿಟ್ಟು ಮೋಸ ಮಾಡಿದ್ದಾರೆ ಎಂದು ಸಾಫ್ಟ್‌ವೇರ್ ಕಂಪನಿ ಮಹಿಳಾ ಉದ್ಯೋಗಿ ಜ್ಞಾನಭಾರತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಶಿವಮೊಗ್ಗ ಮೂಲದ 29 ವರ್ಷದ ಸಂತ್ರಸ್ತೆ. ಈಕೆ ಕೊಟ್ಟ ದೂರಿನ ಮೇರೆಗೆ ಮಲ್ಲತಹಳ್ಳಿಯ ಸಾಫ್ಟ್‌ವೇರ್ ಪತಿ, ಮಾವ ಮತ್ತು ಅತ್ತೆ ಮೇಲೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಎಂಬಿಎ ಓದಿ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವನಾನು 2020ರಲ್ಲಿ ಹಿಂದು ಸಂಪ್ರದಾಯದಂತೆ ಮದುವೆ ಸಾಫ್ಟ್‌ವೇರ್ ಇಂಜಿನಿಯರ್‌ನ್ನು ಮದುವೆ ಆಗಿದ್ದಾನೆ. 160 ಗ್ರಾಂ ಚಿನ್ನಾಭರಣ ಕೊಟ್ಟು, 10 ಲಕ್ಷ ರೂ. ಖರ್ಚು ಮಾಡಲಾಗಿತ್ತು. ಮದುವೆ ಬಳಿಕವೂ 2 ವರ್ಷಗಳ ಕಾಲ ಕಂಪನಿ ಕೆಲಸಕ್ಕೆ ಹೋಗಿದ್ದೆ. ಆನಂತರ ಕೆಲಸಕ್ಕೆ ಹೋಗುವುದು ಬೇಡ ಎಂದು ಅತ್ತೆ-ಮಾವ ಬಿಡಿಸಿದರು.

ಇದಾದ ಮೇಲೂ ನನ್ನ ಪತಿ ನನ್ನೊಂದಿಗೆ ಸೇರುತ್ತಿರಲಿಲ್ಲ. ಸಂಬಂಧಿಕರು ಮತ್ತು ಆಪ್ತರು 3 ವರ್ಷ ಆದರೂ ಮಕ್ಕಳು ಯಾಕೇ ಆಗಿಲ್ಲ ಎಂದು ಪ್ರಶ್ನೆ ಮಾಡುತ್ತಿದ್ದರು. ಅದಕ್ಕಾಗಿ ನಾನು ಮತ್ತು ನನ್ನ ಪತಿ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಿಕೊಂಡಾಗ ಯಾವುದೇ ಸಮಸ್ಯೆ ಇಲ್ಲವೆಂದು ಹೇಳಿದರು. ಗಂಡನ ಜತೆಗೆ ಚರ್ಚೆ ನಡೆಸಿ ಕೃತಕ ಗರ್ಭಧಾರಣೆ ಮಾಡಿಸಿಕೊಳ್ಳಲು ಮಲ್ಲೇಶ್ವರದ ಆಸ್ಪತ್ರೆಗೆ ಹೋದಾಗ ಸಾಧ್ಯವಾಗುವುದಿಲ್ಲ ಎಂದು ವೈದ್ಯರು ತಿಳಿಸಿದರು. ಕೊನೆಗೆ ನನ್ನ ಗಂಡನ ನಡವಳಿಕೆ ಮೇಲೆ ಅನುಮಾನ ಬಂದು ಅವರ ಮೊಬೈಲ್ ವಾಟ್ಸ್‌ಆ್ಯಪ್ ಮತ್ತು ಮೆಸೆಂಜರ್ ಪರಿಶೀಲನೆ ನಡೆಸಿದಾಗ ಪರ ಪುರುಷನೊಂದಿಗೆ ದೈಹಿಕ ಸಂಪರ್ಕ ಇರುವುದು ತಿಳಿಯಿತು.

ಈ ಬಗ್ಗೆ ಗಂಡನ ಬಳಿ ಪ್ರಶ್ನಿಸಿದಾಗ ನನಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಕೊಡಲು ಪ್ರಾರಂಭಿಸಿದ. ಕೊನೆಗೆ ನೊಂದು ತವರು ಮನೆಗೆ ಬಂದಾಗ ಪದೇ ಪದೆ ಕರೆ ಮಾಡಿ ಕಿರುಕುಳ ಶುರು ಮಾಡಿದ್ದಾನೆ. ಸಂಬಂಧಿಕ ಕಡೆಯಿಂದಲೂ ಕರೆ ಮಾಡಿಸಿ ತೊಂದರೆ ಕೊಡುತ್ತಿದ್ದಾರೆ. ಸಲಿಂಗಿ ಎಂಬ ವಿಚಾರ ಮುಚ್ಚಿಟ್ಟು ನನ್ನೊಂದಿಗೆ ಮದುವೆ ಮಾಡಿರುವ ಅತ್ತೆ-ಮಾವನ ಮತ್ತು ಗಂಡನ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net