

ಉತ್ತರಪ್ರದೇಶ: ಸೌದಿ ಅರೇಬಿಯಾದಲ್ಲಿರುವ ಪತಿ ಮಹಿಳೆ ಐಬ್ರೋ ಮಾಡಿಸಿಕೊಂಡಿರುವುದನ್ನು ವಿಡಿಯೋ ಕಾಲ್ನಲ್ಲಿ ಗಮನಿಸಿ ಕೋಪಗೊಂಡು ಫೋನ್ನಲ್ಲಿಯೇ ತ್ರಿವಳಿ ತಲಾಖ್ ನೀಡಿದ ಘಟನೆ ನಡೆದಿದೆ.
ನಡೆದಿದ್ದೇನು?: ಲಾಲಿ ಗುಲ್ಸಾಬ ಎನ್ನುವ ಮಹಿಳೆ 2022ರ ಜನವರಿ 17 ರಂದು ಪ್ರಯಾಗ್‌ರಾಜ್ ನಿವಾಸಿ ಸಲೀಂನನ್ನು ವಿವಾಹವಾಗಿದ್ದರು. ಮದುವೆಯಾದ ಬಳಿಕ ಲಾಲಿ ಗುಲ್ಸಾಬ ಕುಟುಂಬವು ಪ್ರಯಾಗರಾಜ್‌ನ ಫುಲ್‌ಪುರದಲ್ಲಿ ವಾಸಿಸುತ್ತಿದೆ. ಆದರೆ, ಸಲೀಂ ಸೌದಿ ಅರೇಬಿಯಾದಲ್ಲಿ ವಾಸ ಮಾಡುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ಪತಿ, ಹೆಂಡತಿಗೆ ಕರೆ ಮಾಡಿದ್ದಾನೆ. ಆಗ ಪತ್ನಿ ಹೈ ಬ್ರೋ ಮಾಡಿಸಿಕೊಂಡಿರುವುದನ್ನು ವಿಡಿಯೋ ಕಾಲ್ನಲ್ಲಿ ಗಮನಿಸಿ ಕೋಪಗೊಂಡು ಫೋನ್ನಲ್ಲಿಯೇ ತ್ರಿವಳಿ ತಲಾಖ್ ನೀಡಿದ್ದಾನೆ. ಪತ್ನಿ ಐಬ್ರೋ ಮಾಡಿಸಿಕೊಂಡಿದ್ದಾಳೆ ಎನ್ನುವ ಕಾರಣಕ್ಕೆ ವಿಡಿಯೋ ಕಾಲ್‌ನಲ್ಲಿಯೇ ಪತಿ ತನ್ನ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾರೆನೆ. ಆ ಬಳಿಕ ಮಹಿಳೆ ಹಲವು ಬಾರಿ ತನ್ನ ಪತಿಗೆ ಕರೆ ಮಾಡಿದರೂ ಆತ ಕರೆ ಸ್ವೀಕರಿಸಿಲ್ಲ.
ಮಹಿಳೆ ಹೇಳಿದ್ದೇನು?: ನನ್ನ ಪತಿ ಸ್ವಲ್ಪ ಹಳೆ ಫ್ಯಾಷನ್‌ನವರು. ನಾನು ಮೇಕಪ್ ಮಾಡುವುದು ಮತ್ತು ಬ್ಯೂಟಿ ಪಾರ್ಲರ್‌ಗೆ ಹೋಗುವುದು ಅವರಿಗೆ ಇಷ್ಟವಿಲ್ಲ. ನಾನು ಐಬ್ರೋ ಮಾಡಿಸಿಕೊಂಡಿದ್ದರಿಂದ ಅವರಿಗೆ ಸಿಟ್ಟು ಬಂದಿತ್ತು . ಆಮೇಲೆ ಸರಿ ಆಗುತ್ತಾರೆ ಎಂದು ಭಾವಿಸಿದ್ದೆ. ಆದರೆ ಇನ್ನೊಮ್ಮೆ ಅವರೊಂದಿಗೆ ಮಾತನಾಡಿದಾಗ ಈ ವಿಚಾರವಾಗಿ ಜಗಳ ಆರಂಭಿಸಿ ನಾನು ನಿನಗೆ ತ್ರಿವಳಿ ತಲಾಖ್ ನೀಡುತ್ತಿದ್ದೇನೆ ಎಂದಿದ್ದರು. ಇದಾದ ಬಳಿಕ ಫೋನ್ ಡಿಸ್ಕನೆಕ್ಟ್ ಮಾಡಿದ್ದಾರೆ. ನಾನು ಅವರಿಗೆ ಆ ಬಳಿಕ ಹಲವಾರು ಬಾರಿ ಕರೆ ಮಾಡಿದೆ, ಆದರೆ ಅವನು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ನಂತರ ನಾನು ಈ ಬಗ್ಗೆ ನನ್ನ ಅತ್ತೆಯ ಬಳಿ ಮಾತನಾಡಿದಾಗ ಅವರೂ ನನ್ನ ಪತಿಯನ್ನು ಬೆಂಬಲಿಸಲು ಪ್ರಾರಂಭಿಸಿದರು. ನಮ್ಮ ಮಗ ಏನೇ ಮಾಡಿದರೂ ಸರಿ ಎಂದು ಹೇಳಿದ್ದಾರೆ. ನಂತರ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದಿದ್ದಾಳೆ.
ಯುವತಿ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವತಿ, ಪತಿ, ಅತ್ತೆ, ಮಾವ ಸೇರಿದಂತೆ ಐವರ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆ ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಭಾರತ ಸರ್ಕಾರವು ತ್ರಿವಳಿ ತಲಾಖ್‌ನ ಪರಿಣಾಮದಿಂದ ಮುಸ್ಲಿಂ ಮಹಿಳೆಯರಿಗೆ ಕಾನೂನು ಸ್ವಾತಂತ್ರ್ಯವನ್ನು ನೀಡಿದ ನಂತರವೂ ಕೆವರು ಕಾನೂನನ್ನು ನಿರ್ಲಕ್ಷಿಸಿ ಪತ್ನಿಯರಿಗೆ ತಲಾಖ್ ನೀಡುತ್ತಿದ್ದಾರೆ.