ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಕಿರುಕುಳ ನೀಡುತ್ತಿದ್ದ ಪತ್ನಿ; ಪತಿ ಆತ್ಮಹತ್ಯೆ

hangmen
Published on

ಬೆಂಗಳೂರು: ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಸದಾ ಕಿರುಕುಳ ನೀಡುತ್ತಿದ್ದ ಪತ್ನಿಯಿಂದ ಮನನೊಂದ ವ್ಯಕ್ತಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಕುಮಾರಸ್ವಾಮಿ ಲೇಔಟ್​​ನಲ್ಲಿ ನಡೆದಿದೆ. ಗಂಗಾಧರನಗರದ ರಾಘವೇಂದ್ರ (34) ಮೃತ. ಶನಿವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಘವೇಂದ್ರ ಹಾಗೂ ಅವರ ಪತ್ನಿ ರೂಪಾ ಮೂಲತಃ ರಾಯಚೂರಿನವರು. ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿ ಪ್ರತ್ಯೇಕವಾಗಿದ್ದರು. ರೂಪಾ ಶಾಂಕಾಬರಿನಗರದಲ್ಲಿರುವ ತವರು ಮನೆಯಲ್ಲಿ ಮಕ್ಕಳ ಜತೆ ವಾಸವಾಗಿದ್ದರು. ಗಂಗಾಧರನಗರದಲ್ಲಿ ತನ್ನ ಪಾಲಕರ ಜತೆ ರಾಘವೇಂದ್ರ ವಾಸವಾಗಿದ್ದ.

ಶನಿವಾರ ಮಧ್ಯಾಹ್ನ ರಾಘವೇಂದ್ರ ಅವರನ್ನು ಊಟಕ್ಕೆ ಕರೆಯಲೆಂದು ತಾಯಿ ಕೋಣೆಗೆ ಬಂದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.  ಮಗನ ಸಾವಿಗೆ ಸೊಸೆ ಹಾಗೂ ಆಕೆಯ ಕುಟುಂಬ ಸದಸ್ಯರ ಕಿರುಕುಳವೇ ಕಾರಣ ಎಂದು ಮೃತನ ಪಾಲಕರು ದೂರು ನೀಡಿದ್ದಾರೆ. ರಾಘವೇಂದ್ರ ಪತ್ನಿ ಹಾಗೂ ಅತ್ತೆ ವಿರುದ್ಧ ಆತ್ಮಹತ್ಯೆಗೆ ಪ್ರಚೋಧನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಕುಮಾರಸ್ವಾಮಿ ಲೇಔಟ್ ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net