ಪತ್ನಿಯನ್ನು ದೂಷಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ

3-67cb34b57e170
Published on

ಮುಂಬೈ: ಪತ್ನಿ ಹಾಗೂ ಆಕೆಯ ಚಿಕ್ಕಮ್ಮ ನನ್ನು ದೂಷಿಸಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಶಾಂತ್ ತ್ರಿಪಾಠಿ (41) ಸಾವಿಗೀಡಾದ ವ್ಯಕ್ತಿ. ಮುಂ ಬೈನ ಸಹರಾ ಹೋಟೆಲ್ ಕೊಠಡಿಯಲ್ಲಿ ಈ ಘಟನೆ ನಡೆದಿದೆ.

ನಿಶಾಂತ್ ಸಾಯುವ ಮುನ್ನ ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್​ಸೈಟ್​ನಲ್ಲಿ ಡೆತ್​ನೋಟ್ ಅಪ್ಲೋಡ್ ಮಾಡಿದ್ದರು. 3 ದಿನಗಳ ಮೊದಲು ಹೋಟೆಲ್​ಗೆ ಬಂದಿದ್ದ ನಿಶಾಂತ್, ‘ಡು ನಾಟ್ ಡಿಸ್ಟರ್ಬ್’ ಎಂಬ ಫಲಕ ಬಾಗಿಲಿಗೆ ತಗುಲಿಸಿದ್ದರು. ಸುದೀರ್ಘ ಸಮಯದಿಂದ ಹೊರಗೆ ಬರದಿದ್ದನ್ನು ಗಮನಿಸಿದ ಹೋಟೆಲ್​ನವರು ಮಾಸ್ಟರ್ ಕೀ ಬಳಸಿ ಒಳ ಹೊಕ್ಕಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿತ್ತು. ನಿಶಾಂತ್ ತಾಯಿ ನೀಲಂ ಚತುರ್ವೆದಿ ದೂರಿನ ಮೇರೆಗೆ ಆತನ ಪತ್ನಿ ಅಪೂರ್ವ ಪಾರಿಖ್, ಪತ್ನಿಯ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಡೆತ್​ನೋಟ್​ನಲ್ಲಿ ಪತ್ನಿಯ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದ ನಿಶಾಂತ್, ಸಾವಿಗೆ ಪತ್ನಿ ಮತ್ತು ಪ್ರಾರ್ಥನಾ ಕಾರಣ ಎಂದು ದೂಷಿಸಿದ್ದಾರೆ. ‘ನೀನು ಇದನ್ನು ಓದುವಷ್ಟರಲ್ಲಿ ನಾನು ಹೋಗಿರುತ್ತೇನೆ. ನನ್ನ ಕೊನೆಯ ಕ್ಷಣಗಳಲ್ಲಿ ನಿನ್ನನ್ನು ದ್ವೇಷಿಸಬಹುದಿತ್ತು. ಆದರೆ ಹಾಗೆ ಮಾಡದೆ ಈ ಕ್ಷಣದಲ್ಲೂ ಪ್ರೀತಿಯನ್ನೇ ಆಯ್ಕೆ ಮಾಡಿ ಕೊಳ್ಳುತ್ತೇನೆ. ನಾನು ಮೊದಲೂ ನಿನ್ನನ್ನು ಪ್ರೀತಿಸುತ್ತಿದ್ದೆ, ಈಗಲೂ ಪ್ರೀತಿಸುತ್ತಿದ್ದೇನೆ. ನನ್ನ ಕಷ್ಟಗಳೆಲ್ಲ ತಾಯಿಗೆ ಗೊತ್ತು, ನೀನು ಮತ್ತು ಪ್ರಾರ್ಥನಾ ನನ್ನ ಸಾವಿಗೆ ಕಾರಣ. ನೀವು ದಯವಿಟ್ಟು ನನ್ನ ಅಮ್ಮನನ್ನು ಭೇಟಿ ಆಗಬೇಡಿ, ಆಕೆ ಈಗಾಗಲೇ ಭಾರಿ ನೊಂದಿದ್ದಾಳೆ’ ಎಂದು ನಿಶಾಂತ್ ಡೆತ್​ನೋಟ್​ನಲ್ಲಿ ಬರೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net