ಪತ್ನಿಯನ್ನು ಎತ್ತಿಕೊಂಡು ಬಂದು ಹಾಸನಾಂಬೆ ದರ್ಶನ ಪಡೆದ ಪತಿ; ಕಾರಣವಿದು...

1372323
Published on

ಹಾಸನ: ಇಲ್ಲೊಬ್ಬರು ವ್ಯಕ್ತಿ ಪತ್ನಿಯನ್ನು ಎತ್ತಿಕೊಂಡು ಮೆಟ್ಟಿಲೇರಿ ದೇವರ ದರ್ಶನ ಪಡೆದು ಗಮನ ಸೆಳೆದಿದ್ದಾರೆ. ಹೀಗೆ ಇವರು ತಾವು ಹಾಸನಾಂಬೆಯ ದರ್ಶನ ಮಾಡಿದ್ದಲ್ಲದೆ ಪತ್ನಿಗೂ ಹಾಸನಾಂಬೆಯ ದರ್ಶನ ಮಾಡಿಸಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಬೀಚೇನಹಳ್ಳಿಯ ನಾಗರಾಜ್ ತಮ್ಮ ಪತ್ನಿ ಗೌರಮ್ಮ ಅವರನ್ನು ಎತ್ತಿಕೊಂಡು ಬಂದು ದರ್ಶನ ಪಡೆದಿದ್ದಾರೆ. ವಿಶೇಷಚೇತನ ಪತ್ನಿಯ ಆಸೆ ಈಡೇರಿಸಲು ಅವರು ಇಂಥದ್ದೊಂದು ಕಾರ್ಯವನ್ನು ಮಾಡುವ ಮೂಲಕ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಪತ್ನಿಯನ್ನು ಎತ್ತಿಕೊಂಡು ಬಂದ ನಾಗರಾಜ್​ಗೆ ಪೊಲೀಸರು ದೇವರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರನ್ನು ನೇರವಾಗಿ ಗರ್ಭಗುಡಿಯ ಸಮೀಪಕ್ಕೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ. ಅಂದಹಾಗೆ ನಾಗರಾಜ್ ಹೀಗೆ ಮಾಡುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇವರು ಪತ್ನಿಯನ್ನು ಇದೇ ರೀತಿ ಎತ್ತಿಕೊಂಡು ಬಂದು ದೇವರ ದರ್ಶನ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net