ಬೈಕ್​ನಲ್ಲಿ ಹೋಗುತ್ತಿದ್ದಾಗಲೇ ಸಾವು!; ದ್ವಿಚಕ್ರವಾಹನ ಚಲಾಯಿಸುತ್ತಿರುವಾಗ ಬಡಿದ ಸಿಡಿಲು..

Praveen
Published on

ಹುಬ್ಬಳ್ಳಿ: ಸಾಮಾನ್ಯವಾಗಿ ಮಳೆ-ಗುಡುಗು-ಸಿಡಿಲು ಬರುವಾಗ ಮರಗಳ ಕೆಳಗೆ ಆಶ್ರಯ ಪಡೆದು ಸಾವಿಗೀಡಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೈಕ್​ನಲ್ಲಿ ಸಾಗುತ್ತಿರುವಾಗಲೇ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಈ ದುರಂತ ಸಂಭವಿಸಿದೆ.

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಮತ್ತು ಪಶುಪತಿಹಾಳ ಮಾರ್ಗಮಧ್ಯೆ ಈ ಅವಘಡ ಸಂಭವಿಸಿದೆ. ಪರಿಣಾಮವಾಗಿ ಬೈಕ್​ ಸವಾರ, ಪಶುಪತಿಹಾಳದ ನಿವಾಸಿ ಪ್ರವೀಣ್ ಬಡಿಗೇರ (32) ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಹುಬ್ಬಳ್ಳಿಯ ಖಾಸಗಿ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್, ಕೆಲಸ ಮುಗಿಸಿ ವಾಪಸ್ ಮನೆಗೆ ತೆರಳುವಾಗ ಈ ಅವಘಡ ಸಂಭವಿಸಿದೆ. ಇವರು ಬೈಕ್​ನಲ್ಲಿ ಹೋಗುತ್ತಿರುವಾಗಲೇ ಸಿಡಿಲು ಅಪ್ಪಳಿಸಿ ಸಾವು ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net