ಪತ್ನಿಯ ಕೊಲೆ ಮುಚ್ಚಿಡಲು ಸ್ಮಶಾನದಲ್ಲಿ ಶವ ಹೂತ ಪತಿ

photo-14-68a61350d6df3
Published on

ನವದೆಹಲಿ: ಪ್ರಿಯಕರನೊಂದಿಗೆ ತನ್ನ ಪತ್ನಿ ಪರಾರಿ ಯಾಗಿದ್ದಾಳೆಂದು ಬಿಂಬಿಸಲು ಆಕೆಯನ್ನು ಕೊಂದು ಸ್ಮಶಾನದಲ್ಲಿ ಹೂತುಹಾಕಿದ ಆಘಾತಕಾರಿ ಪ್ರಕರಣವೊಂದು ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ. ದುಷ್ಕರ್ವಿು ಹಾಗೂ ಆತನ ಇಬ್ಬರು ಸಹಚರರನ್ನು ದೆಹಲಿ ಪೊಲೀಸರು ಬಂಧಿಸಿ ದ್ದಾರೆ. ಬಾಲಿವುಡ್​ನ ದೃಶ್ಯಂ ಸಿನಿಮಾವನ್ನು ಹೋಲುವಂಥ ಈ ಪ್ರಕರಣವು ಸಿಸಿಟಿವಿ ಫೂಟೇಜ್​ನಿಂದ ಬಯಲಾಗಿದೆ. ಉತ್ತರ ಪ್ರದೇಶದ ಅಮ್ರೋಹಾದ ಪೇಂಟರ್ ಆಗಿರುವ 47 ವರ್ಷದ ಶಾಬಾದ್ ಅಲಿ, ತನ್ನ ಪತ್ನಿ ಫಾತಿಮಾಳ ಶೀಲ ಶಂಕಿಸಿ ಮೆಹರೌಲಿಯಲ್ಲಿ ಕೊಲೆ ಮಾಡಿದ್ದ ಎಂದು ದಕ್ಷಿಣ ಡಿಸಿಪಿ ಅಂಕಿತ್ ಚೌಹಾಣ್ ತಿಳಿಸಿದ್ದಾರೆ. ಫಾತಿಮಾ ಕ್ರಿಮಿನಾಶಕ ಗಳನ್ನು ಕುಡಿಯುವಂತೆ ಮಾಡಿದ್ದ ಅಲಿ, ಆಕೆಗೆ ಐದು ದಿನ ಕಾಲ ಮತ್ತು ಬರಿಸುವ ಮಾತ್ರೆಗಳನ್ನು ತಿನ್ನಿಸಿದ್ದ. ಇದರಿಂದ ಸತ್ತು ಹೋದ ಫಾತಿಮಾಳ ಕಳೇಬರವನ್ನು ಸಹಚರರಾದ ಶಾರುಖ್ ಖಾನ್, ತನ್ವೀರ್ ಹಾಗೂ ಇನ್ನೊಬ್ಬನ ನೆರವಿನಿಂದ ಕಾರಿನಲ್ಲಿ ಮೆಹರೌಲಿಯ ಸ್ಮಶಾನಕ್ಕೆ ಒಯ್ದು ಹೂತು ಹಾಕಿದ್ದ. ಬಟ್ಟೆಗಳನ್ನು ನಾಲೆಯೊಂದಕ್ಕೆ ಎಸೆದಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net