ಪತ್ನಿಯ ಮೇಲೆ ಅನೈತಿಕ ಸಂಬಂಧ ಶಂಕೆ: ಆಕೆಯ ಜನನಾಂಗವನ್ನೇ ಮುಚ್ಚಿದ ದುರುಳ ಪತಿರಾಯ

Glue
Published on

ಕಿತುಯಿ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಶಂಕೆ ವ್ಯಕ್ತಪಡಿಸಿ ವ್ಯಕ್ತಿಯೊಬ್ಬ ಆಕೆಯ ಜನನಾಂಗವನ್ನು ಸೂಪರ್​ ಗ್ಲೂ(ಅಂಟು)ನಿಂದ ಮುಚ್ಚಲು ಯತ್ನಿಸಿದ ಅಮಾನವೀಯ ಘಟನೆ ಕೀನ್ಯಾದಲ್ಲಿ ನಡೆದಿದೆ.

ಆರೋಪಿಯನ್ನು ಡೆನ್ನಿಸ್​ ಮುಮೊ(36) ಎಂದು ಗುರುತಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಹಲ್ಲೆ ಮತ್ತು ಸಂತಾನೋತ್ಪತಿ ಅಂಗವನ್ನು ಮುಚ್ಚಲು ಯತ್ನಿಸಿದ್ದಕ್ಕೆ ಕೌಟುಂಬಿಕ ಹಿಂಸೆಯಡಿ ಪ್ರಕರಣ ದಾಖಲಿಸಲಾಗಿದೆ.

ತನ್ನ ಮದುವೆಯನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಅಪರಾಧ ಎಸಗಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ತನ್ನ ಪತ್ನಿಯು ನಾಲ್ವರು ವ್ಯಕ್ತಿಗಳೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂದು ಶಂಕೆ ವ್ಯಕ್ತಪಡಿಸಿದ್ದಾನೆ.

ಅಪರಿಚಿತ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದ ಪತ್ನಿ, ಅವರಿಗೆ ಬೆತ್ತಲೆ ಫೋಟೋಗಳನ್ನು ಕಳುಹಿಸುತ್ತಿದ್ದಳು. ಬಿಸಿನೆಸ್​ ಟ್ರಿಪ್​ಗೆಂದು ಹೊರಗಡೆ ಹೋದಾಗ ಅವರೊಂದಿಗೆ ಸೇರುತ್ತಿದ್ದಳು ಎಂದು ಆರೋಪಿಸಿದ್ದಾನೆ.

ರವಾಂಡದಿಂದ ಬಿಸಿನೆಟ್​ ಟ್ರಿಪ್​ಗೆಂದು ಹೊರಡುವ ಮುನ್ನ ಗ್ಲೂ(ಅಂಟು) ತೆಗೆದುಕೊಂಡು ಪತ್ನಿಯ ಜನನಾಂಗಕ್ಕೆ ಹಚ್ಚಿದ್ದಾನೆ. ಇದರಿಂದ ಗಂಭೀರ ನೋವಿಗೆ ತುತ್ತಾದ ಮಹಿಳೆ ಆಸ್ಪತ್ರೆಗೆ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ಸೋಮವಾರ ವಿಚಾರಣೆ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net