ಗಂಡನ ಎದುರೇ ಹೆಂಡತಿಯ ಗ್ಯಾಂಗ್​ ರೇಪ್​! ವಿಡಿಯೋ ಚಿತ್ರೀಕರಿಸಿಕೊಂಡು ಎಸ್ಕೇಪ್​ ಆದ ಕಿರಾತಕರು​!

rape
Published on

ಲಖನೌ: ಗಂಡನ ಎದುರೇ ಹೆಂಡತಿಯನ್ನು ಗ್ಯಾಂಗ್​ ರೇಪ್ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಮೂವರು ಆರೋಪಿಗಳಿಂದ ಈ ಕೃತ್ಯವಾಗಿದ್ದು, ದಂಪತಿಯ ಬಳಿ ಇದ್ದ ಮೌಲ್ಯಯುತ ವಸ್ತುವನ್ನೆಲ್ಲ ಕಸಿದುಕೊಂಡು ಓಡಿಹೋಗಿರುವುದಾಗಿ ಹೇಳಲಾಗಿದೆ.

ಆಗ್ರಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸೋಮವಾರದಂದು ದಂಪತಿ ತಮ್ಮ ತಾಯಿಯ ಮನೆಗೆ ಬೈಕ್​ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ದಂಪತಿಯನ್ನು ಅಡ್ಡಗಟ್ಟಿದ್ದಾರೆ. ಅವರನ್ನು ಬಲವಂತವಾಗಿ ಎಳೆದುಕೊಂಡು ಹತ್ತಿರದ ಕಾಡೊಂದಕ್ಕೆ ಹೋಗಿದ್ದಾರೆ. ಅಲ್ಲಿ ಮಹಿಳೆಯ ಮೇಲೆ ಗ್ಯಾಂಗ್​ ರೇಪ್​ ನಡೆಸಲಾಗಿದೆ. ಆಕೆಯ ಗಂಡನ ಎದುರಿಗೇ ರೇಪ್​ ಮಾಡಲಾಗಿದ್ದು, ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ.

ಅದಾದ ನಂತರ ಅವರ ಬಳಿ ಇದ್ದ 10 ಸಾವಿರ ರೂಪಾಯಿ, ಮಹಿಳೆಯ ಕಿವಿಯೋಲೆ, ಸರವನ್ನೆಲ್ಲ ಬಿಚ್ಚಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ದಂಪತಿ ಮಂಗಳವಾರದಂದು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net