More

    ಏಡಿ ಮೊಟ್ಟೆ ಇಡೋದನ್ನೇ ಕಾಯ್ತಾವೆ ಜಲಚರಗಳು! ಅಚ್ಚರಿ ಮೂಡಿಸುವ ವಿಚಾರಗಳಿವು..

    ಮುಂದುವರಿದ ಭಾಗ…

    ಏಡಿ ಮೊಟ್ಟೆ ಇಡೋದನ್ನೇ ಕಾಯ್ತಾವೆ ಜಲಚರಗಳು! ಅಚ್ಚರಿ ಮೂಡಿಸುವ ವಿಚಾರಗಳಿವು..ಕ್ರಿಸ್ಮಸ್ ಐಲ್ಯಾಂಡ್ ಏಡಿಗಳ ಮೊಟ್ಟೆಗಳು, ನೀರನ್ನು ತಲುಪಿದ ತಕ್ಷಣ ಲಾರ್ವ ಆಗಿ ಈಜುವ ಕಲೆಯನ್ನು ಕಲಿಯುತ್ತವೆ. ಮನುಷ್ಯರು ಮಾವಿನ ಹಣ್ಣಿಗಾಗಿ ಏಪ್ರಿಲ್ ಮೇ ತಿಂಗಳಿಗೆ ಕಾಯುವ ಹಾಗೆ, ಸಮುದ್ರದ ಇತರ ಜಲಚರಗಳು, ಈ ಏಡಿಗಳು ಮೊಟ್ಟೆಗಳನ್ನು ಬಿಡುವುದನ್ನೇ ಕಾಯುತ್ತಾ ಇದ್ದು ಕೋಟ್ಯಂತರ ಲಾರ್ವಗಳನ್ನು ತಿಂದುಹಾಕುತ್ತವೆ. ಅವುಗಳಿಗೆ ಈ ಸೀಸನ್ ಒಂದು ಒಳ್ಳೆಯ ಹಬ್ಬ ಇದ್ದ ಹಾಗೆ. ಆದ್ದರಿಂದ, ಬಹುಶಃ ಒಂದೊಂದು ತಾಯಿ ಏಡಿಗೆ ಒಂದೆರಡು ಮರಿಗಳು ಮಾತ್ರ ಉಳಿಯಬಹುದು. ಅವುಗಳ ಸಂಖ್ಯೆಯೇ ಕೋಟಿಗಳಾಗುತ್ತದೆ. ಇಂತಹ ಉಳಿದ ಕೆಲವು ಲಾರ್ವಗಳು, ನಾಲ್ಕು ವಾರಗಳ ಕಾಲದಲ್ಲಿ ಹಲವು ಲಾರ್ವ ಹಂತಗಳನ್ನು ದಾಟಿ, ಸಮುದ್ರದ ದಡವನ್ನು ತಲುಪಿ, ಒಂದೆರಡು ದಿವಸದಲ್ಲಿ ಸಣ್ಣ ಸಣ್ಣ ಏಡಿಮರಿಗಳಾಗಿ ಪರಿವರ್ತನೆಗೊಂಡು, ಅರಣ್ಯ ಪ್ರದೇಶದ ಕಡೆಗೆ ಪ್ರಯಾಣ ಬೆಳಸಿ ಎಂಟು ಹತ್ತು ದಿವಸಗಳಲ್ಲಿ ಸೂಕ್ತವಾದ ಸ್ಥಳವನ್ನು ತಲುಪುತ್ತವೆ. ಆದರೆ ಇವುಗಳು ಕೇವಲ 5 ಮಿಲಿ ಮೀಟರ್‌ನಷ್ಟು ಗಾತ್ರ ಇರುವುದರಿಂದ ತರಗೆಲೆಗಳ ಅಡಿಯಲ್ಲಿ ಚಲಿಸಿಕೊಂಡು ಹೋಗುತ್ತ, ಎಲೆಗಳನ್ನೆ ತಿನ್ನುತ್ತ, ಎರಡು ಮೂರು ವರ್ಷ ಬದುಕುತ್ತವೆ. ಆದ್ದರಿಂದ ಇವುಗಳ ಪ್ರಯಾಣ ದೊಡ್ಡ ಮಟ್ಟದಲ್ಲಿ ಕಾಣಿಸುವುದಿಲ್ಲ.

    ಮನುಷ್ಯರು ಮರಗಳನ್ನು ಕಡಿದು ಅರಣ್ಯ ನಾಶವಾಗಿರುವುದರಿಂದ ವಾತಾವರಣದಲ್ಲಿ ಮತ್ತು ಭೂಮಿಯ ಮೇಲೆ ತೇವಾಂಶ ಕಡಿಮೆಯಾಗಿರುವುದರಿಂದ ಇವುಗಳ ವಾಸಸ್ಥಾನ ಬಹಳಷ್ಟು ನಾಶವಾಗಿದೆ. ಇವುಗಳು ವಲಸೆ ಹೋಗುವ ಸಂದರ್ಭದಲ್ಲಿ ರಸ್ತೆಗಳಲ್ಲಿ ವಾಹನಗಳು ಚಲಿಸುವುದರಿಂದ ಬಹಳಷ್ಟು ಏಡಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತು ಹೋಗುತ್ತವೆ.

    ಆದ್ದರಿಂದ ಇವುಗಳ ರಕ್ಷಣೆಗಾಗಿ, ಆಸ್ಟ್ರೇಲಿಯಾ ಸರ್ಕಾರ ಕೆಲವು ಕಾನೂನು ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಇವುಗಳ ವಲಸೆ ಸಮಯದಲ್ಲಿ ವಾಹನಗಳಿಗೆ ನಿಷೇಧಿತ ಪ್ರದೇಶ ಎಂದು ಘೋಷಿಸಿದೆ. ರಸ್ತೆಯ ಎರಡೂ ಕಡೆಯಲ್ಲಿ, ಏಡಿಗಳು ರಸ್ತೆಯ ಮೇಲೆ ಬಾರದ ಹಾಗೆ ಸುಮಾರು ಎರಡು ಅಡಿ ಎತ್ತರದ ತಾತ್ಕಾಲಿಕ ಗೋಡೆಯನ್ನು, ಸುಮಾರು 12 ಕಿ.ಮೀ. ಉದ್ದದವರೆಗೆ ನಿರ್ಮಿಸಲಾಗುತ್ತದೆ. ಅವುಗಳು ಹಾದು ಹೋಗಲು ಸುಲಭವಾದ ಚರಂಡಿ ಮತ್ತು ಸುರಂಗಗಳನ್ನು ನಿರ್ಮಿಸಲಾಗಿದೆ. ಸಾಧ್ಯವಾದರೆ ಒಮ್ಮೆ ಕ್ರಿಸ್ಮಸ್ ಐಲ್ಯಾಂಡ್‌ಗೆ ಹೋಗಿ ಬನ್ನಿ.

    ಸ್ನಾನ ಮಾಡಿ ಸಂತಾನಾಭಿವೃದ್ಧಿಗೆ ಕೂರುತ್ತವೆ ಏಡಿಗಳು! ಅಚ್ಚರಿ ತರಿಸುವ ವಿಚಾರಗಳಿವು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts