

ಪುಣೆ: ( train ) ಪತಿ ಮತ್ತು ಪತ್ನಿ ರೈಲಿನಡಿನಲ್ಲಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಗತ್ಪುರಿ ತಾಲೂಕಿನ ಪ್ರಮುಖ ಮಾರುಕಟ್ಟೆ ಸ್ಥಳವಾದ ನಾಸಿಕ್‌ನ ಘೋಟಿಯ ಸುಧಾನಗರ ಪ್ರದೇಶದಲ್ಲಿ ನಡೆದಿದೆ.
ದಿನೇಶ್ ದೇವಿದಾಸ್ ಸಾವಂತ್ ( 38) ಮತ್ತು ಅವರ ಪತ್ನಿ ವಿಶಾಖಾ ದಿನೇಶ್ ಸಾವಂತ್ ( 33) ನಾಸಿಕ್ ನಿಂದ ಇಗತ್ಪುರಿಗೆ ಹೋಗುವ ರೈಲ್ವೆ ಹಳಿಯಲ್ಲಿ ಚಲಿಸುವ ರೈಲಿನ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ದುರದೃಷ್ಟಕರ ಘಟನೆ ಬುಧವಾರ, ಆಗಸ್ಟ್ 6 ರಂದು ಸಂಜೆ 7:45 ರ ಸುಮಾರಿಗೆ ನಡೆದಿದ್ದು, ಆತ್ಮಹತ್ಯೆಗೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸರು ಸ್ಥಳದಲ್ಲಿ ಪಂಚನಾಮ ನಡೆಸಿ ಘೋಟಿ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ವಿಜಯ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.