ಜೀವನ ಕೌಶಲ ಬೆಳೆಸಿಕೊಳ್ಳಲು ಶಿಬಿರಗಳು ಸಹಕಾರಿ; ಶಿವಾನಂದ

15-RNR-05
Published on

ರಾಣೆಬೆನ್ನೂರ: ಸಮಾಜದಲ್ಲಿ ಬದಲಾವಣೆ ಮಾಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಜೀವನ ಕೌಶಲಗಳನ್ನು ಬೆಳೆಸಿಕೊಳ್ಳಲು ಎನ್​ ಎಸ್​ಎಸ್​ ಶಿಬಿರಗಳು ಸಹಕಾರಿಯಾಗಿವೆ ಎಂದು ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್​ ಅಧಿಕಾರಿ ಎಚ್​. ಶಿವಾನಂದ ಹೇಳಿದರು.
ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಬಿ.ಎ.ಜೆ.ಎಸ್​.ಎಸ್​ ಪದವಿ ಪೂರ್ವ ಮಹಾವಿದ್ಯಾಲಯದ ಎನ್​ಎಸ್​ಎಸ್​ ಘಟಕದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾಷಿರ್ಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳ ಅವಶ್ಯಕತೆಯಿದೆ. ಸಮಾಜದಲ್ಲಿ ಬದಲಾವಣೆ ಆಗಬೇಕಾಗಿದೆ. ಅದಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ನಮ್ಮ ಯುವ ಜನಾಂಗವು ಅದರಲ್ಲಿ ವಿದ್ಯಾಥಿರ್ಗಳು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬದುಕಿನೋಡನೆ ನೇರ ಸಂಪರ್ಕ ಇಟ್ಟುಕೊಳ್ಳಬೇಕೆಂದು ಮಹಾತ್ಮ ಗಾಂಧೀಜಿ ಅವರ ಕನಸಾಗಿತ್ತು. ಆದ್ದರಿಂದ ವಿದ್ಯಾಥಿರ್ಗಳು ಯಾವುದೇ ಪ್ರತಿಫಲವಿಲ್ಲದೆ ಸೇವಾ ಮನೋಭಾವನೆ ಬೆಳೆಸಿಕೊಳ್ಳುವುದರ ಮೂಲಕ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.
ಸಹಾಯಕ ಪ್ರಾಧ್ಯಾಪಕ ಶ್ರೀಕಾಂತ ಕುಂಚೂರು ಮಾತನಾಡಿ, ವಿದ್ಯಾಥಿರ್ಗಳಿಗೆ ಶಿಕ್ಷಣದ ಜತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು. ಗುರು ಹಿರಿಯರಿಗೆ ಗೌರವ ನೀಡುವ ನೈತಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಮೊಬೈಲ್​ಗಳಿಂದ ದೂರವಿದ್ದು ವ್ಯಾಸಂಗ ಭವಿಷ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಪ್ರಾಚಾರ್ಯ ಕುಬೇರಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮದ ಮುಖಂಡರಾದ ರುದ್ರಪ್ಪ ಚೌವ್ಹಾಣ, ಚಂದ್ರಪ್ಪ ಕುಪ್ಪೆಲೂರು, ಬಸವರಾಜ ಐರಣಿ, ಹನುಮಂತಪ್ಪ ಗೌಡ್ರು, ಶೇಖಪ್ಪ ಲಮಾಣಿ, ಭಾಗ್ಯ ಐರಣಿ, ಗಿರಿಯಪ್ಪ ಲಮಾಣಿ, ಉಪನ್ಯಾಸಕರಾದ ವೆಂಕಟೇಶ ರೆಡ್ಡಿ ಟಿ., ನಿರಂಜನ ಎನ್​., ಭಾಗ್ಯ ಕಬ್ಬೂರ, ನಂದನ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net