ಶ್ರೀಲಂಕಾ ರಾಷ್ಟ್ರಪತಿ ನಿವಾಸ ನೋಡಲು ಮುಗಿಬಿದ್ದ ಜನ: ಕಿಮೀ ಗಟ್ಟಲೇ ಸಾಲಿನಲ್ಲಿ ನಿಂತ ಜನಸಮೂಹ!

LankaPreZhouse
Published on

ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಾಗೂ ಅರಾಜಕತೆ ಸೃಷ್ಟಿಯಾಗಿದ್ದು, ಸದ್ಯ ವಿಶ್ವದಾದ್ಯಂತ ಲಂಕನ್ನರ ಸ್ಥಿತಿಗೆ ಮರುಕ ವ್ಯಕ್ತವಾಗಿದೆ. ಆದರೆ ಜನರ ನಡವಳಿಕೆಗಳ ಕುರಿತು ಟೀಕೆಗಳೂ ಹರಿದುಬರುತ್ತಿದೆ.

ಶನಿವಾರ ರಾಷ್ಟ್ರಪತಿ ಭವನಕ್ಕೆ ಮುತ್ತಿಗೆ ಹಾಕಿದ ನಾಗರಿಕರು ರಾಷ್ಟ್ರಪತಿ ಭವನ ಬಿಟ್ಟು ಕದಲುತ್ತಿಲ್ಲ. ಇತ್ತ ಹೊರಗಿರುವ ಜನರು ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.

ನಾಗರಿಕರು ದಂಗೆ ಏಳುತ್ತಿದ್ದಂತೆ ಅಧ್ಯಕ್ಷ ಗೋತಬಯ ರಾಜಪಕ್ಸ ಕೆಲವೇ ಕ್ಷಣಗಳ ಮುನ್ನಾ ಪಲಾಯನ ಮಾಡಿದ್ದರು. ಇದೀಗ ಅಲ್ಲೇ ಆಶ್ರಯ ಪಡೆದಿರುವ ಜನರು ಅಲ್ಲಿ, ಜಿಮ್​, ಸ್ವಿಮ್ಮಿಂಗ್​ ಪೂಲ್​ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವ ದೃಶ್ಯಗಳು ಈಗಾಗಲೇ ಹರಿದಾಡುತ್ತಿವೆ.

ಇದೀಗ ರಾಷ್ಟ್ರಪತಿ ಭವನ ಹೇಗಿರುತ್ತೆ ಎಂದು ನೋಡಲೆಂದೇ ಸಾರ್ವಜನಿಕರು ಮುಗಿಬೀಳುತ್ತಿದ್ದು, ಭವನದ ಮುಂದೆ ಜನರು ಕಾದು ಕುಳಿತಿರುವ ದೃಶ್ಯ ಭಾರೀ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net