ಮೂರೇ ನಿಮಿಷಗಳಲ್ಲಿ ನೂರು ಯೋಗಭಂಗಿ

Girl
Published on

ದುಬೈನಲ್ಲಿರುವ ಭಾರತೀಯ ಮೂಲದ 11 ವರ್ಷದ ಸಮೃದ್ಧಿ ಕಾಲಿಯಾ ಪುಟ್ಟ ಜಾಗದಲ್ಲಿ ಕೇವಲ ಮೂರೇ ನಿಮಿಷಗಳಲ್ಲಿ ನೂರು ಯೋಗಭಂಗಿಗಳನ್ನು ಪ್ರದರ್ಶಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರವೇಶಿಸಿದ್ದಾಳೆ. ಇದು ಸಮೃದ್ಧಿಯ ಮೂರನೇ ಯೋಗಸಾಧನೆ ಎಂದು ಖಲೀಜ್ ಟೈಮ್್ಸ ವರದಿ ತಿಳಿಸಿದೆ.

ಬುರ್ಜ್ ಖಲೀಫಾ ವೀಕ್ಷಣಾ ಡೆಕ್​ನಲ್ಲಿ ಮೂರು ನಿಮಿಷ ಹದಿನೆಂಟು ಸೆಕೆಂಡ್​ಗಳಲ್ಲಿ ಸಮೃದ್ಧಿ ಇದನ್ನು ಪ್ರದರ್ಶಿಸಿದ್ದಾಳೆ. ದುಬೈನ ಎಂಬೆಸಿ ಶಾಲೆಯ ವಿದ್ಯಾರ್ಥಿನಿಯಾದ ಈಕೆ, ನಿತ್ಯ ಮೂರು ಗಂಟೆ ಯೋಗಾಭ್ಯಾಸದ ಜತೆಗೆ ಈಜು, ಲಾನ್ ಟೆನಿಸ್, ಸೈಕ್ಲಿಂಗ್, ಐಸ್ ಸ್ಕೇಟಿಂಗ್ ಇಷ್ಟಪಡುತ್ತಾಳೆ ಹಾಗೂ ಬ್ಯಾಡ್ಮಿಂಟನ್ ಕಲಿಯುತ್ತಿದ್ದಾಳೆ. ಯೋಗದಲ್ಲಿನ ಅತ್ಯುತ್ತಮ ಸಾಧನೆಗಾಗಿ 2020ರಲ್ಲಿ ಪ್ರವಾಸಿ ಭಾರತೀಯ ದಿವಸ್ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net