

ಕೊಪ್ಪಳ: ಅಂಜನಾದ್ರಿ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, ಆಂಜನೇಯನ ಹುಂಡಿಯಲ್ಲಿ 25,27,155 ರೂ ಸಂಗ್ರಹವಾಗಿದೆ.
ದೇವಸ್ಥಾನವು ಕೊಪ್ಪಳದ ಗಂಗಾವತಿ ತಾಲ್ಲೂಕಿನ ಆನೆಗುಂದಿಯ ಅಂಜನಾದ್ರಿಯಲ್ಲಿದೆ. 35 ದಿನಗಳಲ್ಲಿ 25,27,155 ರೂಪಾಯಿ ಸಂಗ್ರಹವಾಗಿದೆ. ಕಳೆದ ಬಾರಿ ಜುಲೈ 4 ರಂದು ಹುಂಡಿ ತೆರೆಯಲಾಗಿತ್ತು. ಆಗ 26,57,017 ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ಸಂದರ್ಭದಲ್ಲಿ ವಿವಿಧ ದೇಶಗಳ 3 ವಿದೇಶಿ ನಾಣ್ಯಗಳು ಸಂಗ್ರಹವಾಗಿತ್ತು.
ಭದ್ರತೆ ಹಿನ್ನಲೆ ಸಂಪೂರ್ಣವಾಗಿ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ. ತಾಲೂಕಾಡಳಿತದ ಅಧಿಕಾರಿಗಳು ಹುಂಡಿಕೆ ಎಣಿಕೆ ಕಾರ್ಯವನ್ನು ನಡೆಸಿದರು.
ಈ ಸಂದರ್ಭದಲ್ಲಿ ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟೆ, ಶಿರಸ್ತೇದಾರ್ ರವಿಕುಮಾರ್ ನಾಯಕವಾಡಿ, ಕೃಷ್ಣವೇಣಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.