ದೇವರು ಇಲ್ಲ ಎಂದೂ ಹೇಳಲ್ಲ, ಇದ್ದಾನೆ ಎಂದೂ ಹೇಳಲ್ಲ, ಆದರೆ ಎಲ್ಲಾ ಧರ್ಮಕ್ಕಿಂತ ಮನುಷ್ಯ ಧರ್ಮ ಶ್ರೇಷ್ಠ: ಮಾಜಿ ಸಿಎಂ ಸಿದ್ದರಾಮಯ್ಯ

Siddu
Published on

ಮಂಡ್ಯ: ಶೋಷಣೆ ಮಾಡಲೂ ಅವಕಾಶ ಸಿಗುತ್ತೆ ಎಂದು ಜಾತಿ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಧರ್ಮಕ್ಕಿಂತ ಮನುಷ್ಯತ್ವ ಧರ್ಮ ಶ್ರೇಷ್ಠ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಲ್ಲಾರೇಪುರದಲ್ಲಿ ಮಹದೇಶ್ವಸ್ವಾಮಿ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಧರ್ಮಕ್ಕಿಂದ ಮನುಷ್ಯ ಧರ್ಮ ಶ್ರೇಷ್ಠ,ಯಾರಿಗೆ ಮನುಷ್ಯತ್ವ ಇರಲ್ಲ ಅವರು ಮೃಗಗಳಿಗೆ ಸಮ,ಜಾತಿ ಮಾಡಿರುವವರು ಸ್ವಾರ್ಥಿಗಳು, ಜಾತಿ ವ್ಯವಸ್ಥೆ ಇದ್ದರೆ ಗೌರವ ಸಿಗುತ್ತೆ, ಶೋಷಣೆ ಮಾಡಲು ಅವಕಾಶ ಸಿಗುತ್ತೆ ಎಂದು ಜಾತಿ ಮಾಡಿದ್ದಾರೆ ಎಂದು ಹೇಳಿದರು.

ಸ್ವಾರ್ಥ ಮನೋಭಾವನೆ ಇಲ್ಲದೆ ಭಕ್ತಿಯಿಂದ ದೇವರನ್ನು ನೆನದರೆ ಒಳ್ಳೆಯದಾಗುತ್ತದೆ.ದೇವರು ಇದ್ದಾನೆ, ದೇವರು ಇಲ್ಲ ಎಂದು ನಾನು ಹೇಳಲ್ಲ.ದೇವರು ಎಲ್ಲ ಕಡೆ ಎಲ್ಲೆಲ್ಲೂ ಇದ್ದಾನೆ.ಭಕ್ತ ಪ್ರಹ್ಲಾದ ನಾಟಕದಲ್ಲೂ ಇದೇ ಹೇಳುವುದು.ದೇವರ ಕಣ್ಣು ತಪ್ಪಿಸಿ ಏನು ಮಾಡೋಕೆ ಆಗಲ್ಲ.ದೇವರು ಎಲ್ಲರಲ್ಲಿ ಇದ್ದಾನೆ ಹೀಗಾಗಿ ಏನು ಮಾಡಿದ್ರು ದೇವರಿಗೆ ಗೊತ್ತಾಗುತ್ತೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net