ಚರಂಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ!; ತನಿಖೆ ಆರಂಭಿಸಿದ ಪೊಲೀಸರು

Untitled design (59)
Published on

ನೋಯ್ಡಾ: ಚರಂಡಿಯೊಳಗೆ ಮಾನವ ಅಸ್ಥಿಪಂಜರ ಪತ್ತೆಯಾಗಿದ್ದು, ಈ ಸುದ್ದಿ ತಿಳಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯೂ ಉತ್ತರಪ್ರದೇಶದ ನೋಯ್ಡಾದಲ್ಲಿ ವರದಿಯಾಗಿದೆ.

ಘಟನೆ ವಿವರ: ಚರಂಡಿಯೊಳಗೆ ಮಾನವ ಅಸ್ಥಿಪಂಜರವನ್ನು ಸ್ಥಳೀಯ ಜನರು ಪತ್ತೆಹಚ್ಚಿದ್ದು, ಕೂಡಲೇ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೋಯ್ಡಾ ಸೆಕ್ಟರ್ 136 ರಲ್ಲಿನ ಚರಂಡಿಯಲ್ಲಿ ಅಸ್ಥಿಪಂಜರವನ್ನು ಗುರುತಿಸಿದ ಪೊಲೀಸರು, ಅದು ಪುರುಷ ಎಂದು ಮೊದಲ ಹಂತದ ತನಿಖೆಯ ಮೂಲಕ ಹೇಳಿದ್ದಾರೆ. ಮೃತರ ಗುರುತು ಪತ್ತೆ ಹಚ್ಚಲು ಪೊಲೀಸರು ಹಲವು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಪುರುಷನದು ಎಂದು ನಂಬಲಾದ ಅಸ್ಥಿಪಂಜರವನ್ನು ಹೊರತೆಗೆದು ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ. "ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಚರಂಡಿಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಪೊದೆಗಳಲ್ಲಿ ಸಿಲುಕಿಕೊಂಡಿದ್ದ ಅಸ್ಥಿಪಂಜರ ಸ್ಥಳಕ್ಕೆ ಬಂದಿರಬಹುದು" ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net