ಸಾಧನೆಯಿಂದ ಮಾನವ ಜನ್ಮ ಸಾರ್ಥಕ

CTD 03 Shravana
Published on

ಚಿತ್ರದುರ್ಗ: ಮಾನವ ಜನ್ಮ ದೊಡ್ಡದು. ಹೀಗಾಗಿ ಸಾಮಾನ್ಯ ಎನಿಸಿಕೊಂಡರೆ ಸಾರ್ಥಕ ಆಗದು. ಆದ್ದರಿಂದ ನಿರಂತರ ಪ್ರಯತ್ನದೊಂದಿಗೆ ವಿಶೇಷ ಸಾಧಕರಾಗಬೇಕು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ಮಾವಿನಹಳ್ಳಿ ಗುರು ಬಸವೇಶ್ವರ ಸ್ವಾಮಿ ದೇಗುಲದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿತ್ಯ ಕಲ್ಯಾಣ ಮನೆ-ಮನೆಗೆ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಕಾರಾತ್ಮಕವಾಗಿ ಚಿಂತಿಸುವ ವಿಶೇಷ ವ್ಯಕ್ತಿಗಳಿಗೆ ಪರಿಪೂರ್ಣತೆ ಇರುತ್ತದೆ. ಉತ್ಸಾಹಿಗಳಾಗಿ, ಸ್ಪೂರ್ತಿಯ ಚಿಲುಮೆ, ಭಾವನಾತ್ಮಕ, ಜವಾಬ್ದಾರಿಯುತ ವ್ಯಕ್ತಿಗಳಾಗಿ ಸತ್ಕಾರ್ಯಕ್ಕೆ ಪ್ರಾಮುಖ್ಯ ನೀಡಿ ಪ್ರಾಮಾಣಿಕವಾಗಿ ಶ್ರಮಿಸುವವರಿಗೆ ಸಮಾಜದಲ್ಲಿ ಸದಾ ಗೌರವ ಸಿಗಲಿದೆ ಎಂದರು.

ಲೇಖಕಿ ಡಾ.ಯಶೋಧಾ ರಾಜಶೇಖರಪ್ಪ ಮಾತನಾಡಿ, ಮುರುಘಾಮಠ ಸಮಾಜೋದ್ಧಾರಕ್ಕಾಗಿ ಶ್ರಮಿಸುತ್ತ ಬಂದಿದೆ. ಬಸವಣ್ಣ, ಗೌತಮಬುದ್ಧ, ವಿಶ್ವೇಶ್ವರಯ್ಯ ಹೀಗೆ ಅನೇಕ ಮಹನೀಯರು ತಮ್ಮ ವಿಶೇಷ ದೃಷ್ಟಿಯಿಂದ ಜಗದ ಉದ್ಧಾರಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಅಂತಹ ಸಂಕಲ್ಪ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದಾಗ ಜನ್ಮ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ದೇಗುಲ ಸಮಿತಿ ಉಪಾಧ್ಯಕ್ಷ ಬಿ.ಎಸ್.ವಿಶ್ವನಾಥಪ್ಪ, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ದೇವಿಕುಮಾರಿ, ಶಿವಕುಮಾರ್, ಆರ್.ಗಂಗಾಧರಪ್ಪ, ರುದ್ರಮುನಿಯಪ್ಪ, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net