ಹುಲಿಕೆರೆ ಗ್ರಾಮಸ್ಥರಿಂದ ಪಿಡಿಒಗೆ ಅಭಿನಂದನೆ

30-08-25--krs1
ಗ್ರಾ.ಪಂ ಮಾಜಿ ಸದಸ್ಯ ಚೆಲುವರಾಜು ನೇತೃತ್ವದಲ್ಲಿ ಹುಲಿಕೆರೆ ಗ್ರಾಮಸ್ಥರು ಹುಲಿಕೆರೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಡಾ ಶೋಭರಾಣಿಯವರಿಗೆ ಆತ್ಮಿಯವಾಗಿ ಸನ್ಮಾನಿಸಿ
Published on

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮಸ್ಥರು ಹುಲಿಕೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಡಾ ಶೋಭಾರಾಣಿ ಅವರನ್ನು ಆತ್ಮಿಯವಾಗಿ ಸನ್ಮಾನಿಸಿದರು. ಖಾಸಗಿ ಕಂಪನಿಯೊಂದು ಒತ್ತುವರಿ ಮಾಡಿದ್ದ ಹುಲಿಕೆರೆ ಗ್ರಾಮದ ಬಸ್ ನಿಲ್ದಾಣದ ಜಾಗವನ್ನು ತೆರವು ಮಾಡಿ ಹುಲಿಕೆರೆ ಗ್ರಾಪಂ ಹೆಸರಿಗೆ ಮಾಡುವಂತೆ ಮಾಡಿದ್ದ ಮನವಿಯನ್ನು ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಲಹೆ ಸೂಚನೆಯಂತೆ ಕಾನೂನು ರೀತಿಯ ಕ್ರಮ ಕೈಗೊಂಡ ಪಿಡಿಒ ಡಾ.ಶೋಭಾರಾಣಿ ಅವರನ್ನು ಶ್ಲಾಘಿಸಿ ಹುಲಿಕೆರೆ ಗ್ರಾಮಸ್ಥರು ಗ್ರಾ.ಪಂ. ಮಾಜಿ ಸದಸ್ಯ ಚಲುವರಾಜು ನೇತೃತ್ವದಲ್ಲಿ ಸನ್ಮಾನಿಸಲಾಯಿತು. ಮಾಜಿ ಸದಸ್ಯೆ ರೇಷ್ಮಾ ಭಾನು ಸೇರಿದಂತೆ ಹಲವಾರು ಹುಲಿಕೆರೆ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net