ಐಪಿಒ ಹೂಡಿಕೆದಾರರಿಗೆ ಭರ್ಜರಿ ಲಾಭ!

Published on

ಮುಂಬೈ: ಭಾರತದ ಷೇರು ಮಾರುಕಟ್ಟೆ ಹೊಸ ಗರಿಷ್ಠ ಮಟ್ಟಕ್ಕೆ ಮುಟ್ಟಿರುವ ಬೆನ್ನಲ್ಲೇ, 2023ರಲ್ಲಿ ಐಪಿಒ ಹೂಡಿಕೆದಾರರಿಗೂ ಲಾಭ ತಂದುಕೊಟ್ಟಿದೆ. ಈ ವರ್ಷ ಹೊರ ಬಂದಿರುವ 59 ಐಪಿಒಗಳ ಪೈಕಿ 55 ಕಂಪನಿಯ ಷೇರುಗಳು ಲಾಭ ತಂದುಕೊಟ್ಟಿವೆ.

ಹೂಡಿಕೆದಾರರು ಸರಾಸರಿ ಶೇ. 45 ಲಾಭ ಗಳಿಸಿದ್ದಾರೆ. 59 ಕಂಪನಿಗಳು ಐಪಿಒ ಮೂಲಕ 54,000 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದವು. ಇವುಗಳಲ್ಲಿ ಮೂರನೇ ಎರಡರಷ್ಟು ಕಂಪನಿಗಳು ಬೆಂಚ್​ಮಾರ್ಕ್​ ಸೂಚ್ಯಂಕಗಳನ್ನು ಮೀರಿಸಿ ಉತ್ತಮ ಲಾಭ ನೀಡಿವೆ. 59 ಐಪಿಒಗಳ ಸರಾಸರಿ ಲಾಭ ಶೇ. 26.3 ಆಗಿದೆ. ನಾಲ್ಕು ಐಪಿಒಗಳು ಮಾತ್ರ ನಷ್ಟದಲ್ಲಿ ಈ ವರ್ಷದ ಮುಕ್ತಾಯ ಕಂಡಿವೆ. 9 ಐಪಿಒಗಳ ಬೆಲೆ ಎರಡು ಪಟ್ಟು ಲಾಭವನ್ನು ನೀಡಿದೆ. 23 ಐಪಿಒಗಳು ಶೇ. 50ಕ್ಕಿಂತ ಹೆಚ್ಚಿನ ಲಾಭ ನೀಡಿವೆ.

ನ. 29ರಂದು ಲಿಸ್ಟಿಂಗ್​ ಆದ ಭಾರತೀಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಏಜೆನ್ಸಿ (ಐಆರ್​ಡಿಯಾ) ಶೇ. 221.3 ಲಾಭ ಕೊಟ್ಟಿದೆ. ಸೈಯೆಂಟ್​ ಡಿಎಲ್​ಎಂ ಶೇ. 154.5, ನೆಟ್​ವೆಬ್​ ಟೆಕ್ನಾಲಜೀಸ್​ ಶೇ. 140.7, ಟಾಟಾ ಟೆಕ್ನಾಲಜೀಸ್​ ಶೇ. 136, ಸಿಗ್ನೇಚರ್​ ಗ್ಲೋಬಲ್​ ಶೇ. 128 ಲಾಭ ಕಂಡಿದೆ. ವರ್ಷದಲ್ಲಿ 27 ಮಿಲಿಯನ್​ ಹೊಸ ಹೂಡಿಕೆದಾರರು ಮಾರುಕಟ್ಟೆಗೆ ಪ್ರವೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net