Stock Market: ಷೇರುಪೇಟೆ ಭಾರೀ ಕುಸಿತ: ಒಂದೇ ವಹಿವಾಟಿನಲ್ಲಿ 3 ಲಕ್ಷ ಕೋಟಿ ರೂ.ನಷ್ಟ!

Untitled design - 2025-09-24T165741.826
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 3ನೇ ದಿನವಾದ ಬುಧವಾರ(ಸೆ.23) ಭಾರೀ ಕುಸಿತ ಕಂಡಿದೆ.

ಸೆನ್ಸೆಕ್ಸ್ ದಿನದ ಅಂತ್ಯಕ್ಕೆ 386 ಅಂಕಗಳ ಕುಸಿತದೊಂದಿಗೆ 81,715.63 ಕ್ಕೆ ತಲುಪಿದರೆ, ನಿಫ್ಟಿ 50, 113 ಅಂಕಗಳ ಕುಸಿತದೊಂದಿಗೆ 25,056.90 ಕ್ಕೆ ತಲುಪಿದೆ. ಹೀಗಾಗಿ, ಮಾನದಂಡಗಳು ತಮ್ಮ ಸೋಲಿನ ಓಟವನ್ನು ಸತತ ನಾಲ್ಕನೇ ಅವಧಿಗೆ ವಿಸ್ತರಿಸಿವೆ. ಕಳೆದ ವಾರ ಏರಿಕೆಯಲ್ಲಿದ್ದ ಷೇರುಪೇಟೆ ಈ ಬಾರಿ ವಾರದ ಆರಂಭದಲ್ಲೇ H-1B ವೀಸಾ ಶುಲ್ಕ ಘೋಷಣೆ ಹಿನ್ನೆಲೆ ಹೊಡೆತ ಬಿದ್ದಿದೆ.

BSE-ಪಟ್ಟಿಯಾದ(SENSEX) ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 463.6 ಲಕ್ಷ ಕೋಟಿಗಳಿಂದ 460.5 ಲಕ್ಷ ಕೋಟಿ ರೂ.ಗಳಿಗೆ ಇಳಿದಿದ್ದರಿಂದ, ಒಂದೇ ವಹಿವಾಟಿನಲ್ಲಿ ಹೂಡಿಕೆದಾರರು ಸುಮಾರು 3 ಲಕ್ಷ ಕೋಟಿ ರೂ, ಕಳೆದುಕೊಂಡರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net