ಅಪ್ಪು ಕೊನೆ ಚಿತ್ರಕ್ಕೆ ಭಾರಿ ಬೇಡಿಕೆ; ದಾಖಲೆ ಸೃಷ್ಟಿಸುವ ಮುನ್ಸೂಚನೆ ನೀಡಿದ 'ಜೇಮ್ಸ್'!

jems pic
Published on

ಅಗಲಿದ ನಟ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ಚಿತ್ರ ಜೇಮ್ಸ್‌' ಅದ್ಯಾವ ಪರಿ ಹವಾ ಎಬ್ಬಿಸಿದೆ ಅಂದ್ರೆ, ಎಲ್ಲರ ಬಾಯಲ್ಲೂ ಇದರದ್ದೇ ಮಾತು. ಮಾರ್ಚ್ 17ರಂದು 'ಜೇಮ್ಸ್‌' ರಿಲೀಸ್‌ ಆಗಲಿದ್ದು, ಥಿಯೇಟರ್‌ ಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಇನ್ನು ಈ ಹೊತ್ತಲ್ಲೇ ಬಾಕ್ಸ್‌ ಆಫೀಸ್​​ ನಲ್ಲಿ ಹೊಸ ರೆಕಾರ್ಡ್‌ ಕ್ರಿಯೇಟ್‌ ಮಾಡುವ ಮುನ್ಸೂಚನೆ ಎನ್ನುತ್ತಿದ್ದಾರೆ ಸಿನಿ ತಜ್ಞರು. ಕಾರಣ ಈ ಚಿತ್ರಕ್ಕಿರುವ ಬೇಡಿಕೆ.

ಕಳೆದ 2 ದಶಕಗಳಿಂದಲೂ ಅಪ್ಪು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಧೂಳೆಬ್ಬಿಸುತ್ತಾ ಬಂದಿದ್ದವು. ಆದರೆ ಪವರ್‌ ಸ್ಟಾರ್‌ ಇಂದು ನಮ್ಮೊಡನಿಲ್ಲ ಅನ್ನೋ ನೋವು ದೇಶವನ್ನೇ ಕಾಡುತ್ತಿದೆ. ಆದರೂ ಅವರು ಬಿಟ್ಟು ಹೋದ ಕೊನೆಯ ಸಿನಿಮಾ ಜೇಮ್ಸ್‌ ನಮ್ಮೆದುರು ಭರ್ಜರಿಯಾಗಿ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಇದಕ್ಕಾಗಿ ದೇಶವೇ ಸಂಭ್ರಮದ ತಯಾರಿ ನಡೆಸುತ್ತಿದೆ.

3 ದಿನದಲ್ಲೇ 100 ಕೋಟಿ ಕ್ಲಬ್ ಸೇರೋದು ಪಕ್ಕಾ:

ಇಷ್ಟೆಲ್ಲಾ ಸಂಭ್ರಮಗಳ ನಡುವೆ 'ಜೇಮ್ಸ್‌' ಅಬ್ಬರಕ್ಕೆ ಗಲ್ಲಾ ಪೆಟ್ಟಿಗೆಯೇ ಉಡೀಸ್‌ ಆಗಿ ಹೋಗುತ್ತೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಕೇವಲ 3 ದಿನದ ಒಳಗೆ 100 ಕೋಟಿಗೂ ಹೆಚ್ಚು ಹಣ ಬಾಚೋದು ಪಕ್ಕಾ ಎನ್ನಲಾಗುತ್ತಿದೆ. ಇನ್ನು ಚಿತ್ರ ರಿಲೀಸ್‌ ಆಗಿ ಒಂದು ವಾರ ಕಳೆಯುವ ಒಳಗಾಗಿ ಬಾಕ್ಸ್‌ ಆಫಿಸ್‌ ನಲ್ಲೂ ಹೊಸ ದಾಖಲೆ ಬರೆಯೋದು ಗ್ಯಾರಂಟಿ. ಈ ಮೂಲಕ ಅಪ್ಪು ಫ್ಯಾನ್ಸ್ ಮತ್ತೊಂದು ರೆಕಾರ್ಡ್‌ ಬ್ರೇಕ್‌ ಮಾಡಲು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net