ಇಷ್ಟು ದೊಡ್ಡ ಗಾತ್ರದ ಚಪ್ಪಲಿ ಧರಿಸುತ್ತಾರೆ 'ದಿ ಗ್ರೇಟ್ ಖಲಿ'! ಅಸಲಿ ಸಂಗತಿ ಕೇಳಿ ದಂಗಾದ ನೆಟ್ಟಿಗರು!

WhatsApp Image 2024-04-13 at 7.00.49 AM
Published on

ಮುಂಬೈ: ಡಬ್ಲ್ಯೂಡಬ್ಲ್ಯೂಇ ವೇದಿಕೆಯ ಹೆಸರಾಂತ ಕುಸ್ತಿಪಟು 'ದಿ ಗ್ರೇಟ್ ಖಲಿ' ಭಾರತದ ಪಂಜಾಬ್ ಮೂಲದವರು ಎಂಬ ವಿಷಯ ಅನೇಕರಿಗೆ ತಿಳಿದಿದೆ. ಇವರ ಅಳತೆ ಮೀರಿದ ಎತ್ತರಕ್ಕೆ ಅನೇಕರು ಫಿದಾ ಆಗಿದ್ದು, ಖಲಿ ಕುಸ್ತಿಗಿಂತಲು ಅಖಾಡಕ್ಕೆ ಕೊಡುತ್ತಿದ್ದ ಎಂಟ್ರಿಯೇ ಮಸ್ತ್​ ಎನ್ನುತ್ತಾರೆ. ಭಾರತದಿಂದ ನ್ಯೂಯಾರ್ಕ್​ನತ್ತ ಪಯಣ ಬೆಳಸಿ, ಡಬ್ಲ್ಯೂಡಬ್ಲ್ಯೂಇ ಕುಸ್ತಿಯಲ್ಲಿ ಭಾಗವಹಿಸಿದ ಇವರಿಗೆ ಅಪಾರ ಫ್ಯಾನ್ಸ್ ಬಳಗವಿದೆ. ಖಲಿ ಧರಿಸುವ ಬಟ್ಟೆ, ಶೂ ಜೀವನಶೈಲಿ ಹೇಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಅನೇಕರಿಗಿದೆ. ಆದರೆ, ಇಲ್ಲೊಂದು ಬೃಹತ್ ಗಾತ್ರದ ಚಪ್ಪಲಿ ದಿ ಗ್ರೇಟ್ ಖಲಿಗೆ ತಯಾರಿಸಿರುವುದು ಎಂಬ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ನೋಡುಗರಿಗೆ ಭಾರೀ ಶಾಕ್ ನೀಡಿದೆ.

ಚಪ್ಪಲಿ ಅಂಗಡಿ ಮಾಲೀಕರೊಬ್ಬರು ಈ ಬೃಹತ್ ಗಾತ್ರದ ಪಾದರಕ್ಷೆಗಳನ್ನು ತಯಾರಿಸಿದ್ದು, ತಮ್ಮ ವೀಕ್ಷಕರು ಮತ್ತು ಗ್ರಾಹಕರಿಗಾಗಿ ವಿಡಿಯೋ ಮೂಲಕ ಪ್ರದರ್ಶನಕ್ಕೆ ಇಟ್ಟಿದ್ದಾರೆ. ತಮ್ಮ ವಿಡಿಯೋ ರೀಲ್​ನಲ್ಲಿ, "ನಮ್ಮಲ್ಲಿ ಚಾರ್ಸದ್ದ ಚಪ್ಪಲ್ ಲಭ್ಯವಿದೆ. ಇದರ ಸ್ಟಾಕ್ ಸಹ ನಮ್ಮಲಿದೆ. ನಾವು ಈ ವಿಶೇಷ ಚಪ್ಪಲ್​ನ ನಮ್ಮ ಅಂಗಡಿಯಲ್ಲಿ ತಂದಿದ್ದೇವೆ. ಆಸಕ್ತರು ನಮ್ಮಿಂದ ಇದನ್ನು ಖರೀದಿಸಬಹುದು" ಎಂದು ತಿಳಿಸಿದ್ದಾರೆ. ಆದರೆ, ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಕೇಳಿದ್ದು ಮಾತ್ರ ಇದೊಂದೇ ಪ್ರಶ್ನೆ.

ಇಷ್ಟು ದೊಡ್ಡ ಗಾತ್ರದ ಚಪ್ಪಲಿ ಖಂಡಿತ ನಾವ್ಯಾರು ಧರಿಸಲು ಸಾಧ್ಯವೇ ಇಲ್ಲ. ಇದನ್ನು ಧರಿಸಲು ಸಾಧ್ಯವಿರುವ ಏಕೈಕ ವ್ಯಕ್ತಿ ಅಂದರೆ ಅದು ದೈತ್ಯಾಕಾರದ ಬಾಡಿಬಿಲ್ಡರ್, ಮಾಜಿ ಡಬ್ಲ್ಯೂಡಬ್ಲ್ಯೂಇ ಕುಸ್ತಿಪಟು 'ದಿ ಗ್ರೇಟ್ ಖಲಿ' ಮಾತ್ರ ಎಂದು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಇನ್ನು ಕೆಲವರು ಹೌದು, ಇದು ಖಲಿ ಕಾಲಿಗೆ ಸರಿಹೊಂದುತ್ತದೆ ಎಂದು ಅಭಿಪ್ರಾಯಿಸಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಗೆ ಹೆಚ್ಚೆಚ್ಚು ಲೈಕ್ ಮತ್ತು ಕಮೆಂಟ್​ಗಳು ಹರಿದುಬಂದಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net