More

    ಜಯದ ಹಾದಿಗೆ ಡೆಲ್ಲಿ ಕ್ಯಾಪಿಟಲ್ಸ್: ಕೊಹ್ಲಿ, ಗಿಲ್ ಸಾಧನೆಯ ಸಾಲಿಗೆ ಸೇರಿದ ಪಂತ್

    ಲಖನೌ: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (20ಕ್ಕೆ 3) ಬಿಗಿ ಬೌಲಿಂಗ್ ದಾಳಿ ಮತ್ತು ಜೇಕ್ ್ರೇಸರ್ ಮೆಕ್‌ಗುರ್ಕ್ (55 ರನ್, 35 ಎಸೆತ, 2 ಬೌಂಡರಿ, 5 ಸಿಕ್ಸರ್) ಪದಾರ್ಪಣೆಯ ಪಂದ್ಯದಲ್ಲೇ ನಡೆಸಿದ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-17ರಲ್ಲಿ ಆತಿಥೇಯ ಲಖನೌ ಸೂಪರ್‌ಜೈಂಟ್ಸ್ ಎದುರು 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ರಿಷಭ್ ಪಂತ್ ಪಡೆ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿದ್ದು, ಆರ್‌ಸಿಬಿ ಕೊನೇ ಸ್ಥಾನಕ್ಕೆ ಕುಸಿದಿದೆ. ಸತತ 3 ಗೆಲುವಿನ ಬಳಿಕ ಟೂರ್ನಿಯಲ್ಲಿ 2ನೇ ಸೋಲುಂಡ ಕೆಎಲ್ ರಾಹುಲ್ ಬಳಗ 4ನೇ ಸ್ಥಾನಕ್ಕಿಳಿದಿದೆ.

    ಏಕನಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಲಖನೌ ಅಗ್ರ ಕ್ರಮಾಂಕ ಕುಲದೀಪ್ ದಾಳಿಗೆ ಲಯ ತಪ್ಪಿತು. ಆಗ ಯುವ ಬ್ಯಾಟರ್ ಆಯುಷ್ ಬಡೋನಿ (55* ರನ್, 35 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಅರ್ಷದ್ ಖಾನ್ (20*) ಜೋಡಿ ದಿಟ್ಟ ಜತೆಯಾಟದ ನೆರವಿನಿಂದ ಲಖನೌ 7 ವಿಕೆಟ್‌ಗೆ 167 ರನ್‌ಗಳ ಪೈಪೋಟಿಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಜೇಕ್ ್ರೇಸರ್ ಮೆಕ್‌ಗುರ್ಕ್- ನಾಯಕ ರಿಷಭ್ ಪಂತ್ (41) ಜತೆಯಾಟದ ಬಲದಿಂದ ಡೆಲ್ಲಿ,18.1 ಓವರ್‌ಗಳಲ್ಲಿ 4 ವಿಕೆಟ್‌ಗೆ 170 ರನ್‌ಗಳಿಸಿ ಜಯದ ಹಳಿಗೆ ಮರಳಿತು.

    2. ಜೇಕ್ ್ರೇಸರ್ ಮೆಕ್‌ಗುರ್ಕ್ ಐಪಿಎಲ್‌ನಲ್ಲಿ ತಾನೆದುರಿಸಿದ 2 ಎಸೆತದಲ್ಲಿ ಸಿಕ್ಸರ್ ಸಿಡಿಸಿದ 2ನೇ ಬ್ಯಾಟರ್. ಸುರೇಶ್ ರೈನಾ ಮೊದಲಿಗರು. ಸಮೀರ್ ರಿಜ್ವಿ ಮೊದಲ ಎಸೆತದಲ್ಲೇ ಸಿಕ್ಸರ್ ದಾಖಲಿಸಿದ ಮೊದಲಿಗ.

    1: ರಿಷಭ್ ಪಂತ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 3 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್. ಒಟ್ಟಾರೆ 25ನೇ ಆಟಗಾರ.

    3. ರಿಷಭ್ ಪಂತ್ (26 ವರ್ಷ, 191 ದಿನ) ಐಪಿಎಲ್‌ನಲ್ಲಿ 3 ಸಾವಿರ ರನ್‌ಗಳಿಸಿದ 3ನೇ ಕಿರಿಯ ಬ್ಯಾಟರ್. ಶುಭಮಾನ್ ಗಿಲ್ (24 ವರ್ಷ, 215 ದಿನ), ವಿರಾಟ್ ಕೊಹ್ಲಿ (26 ವರ್ಷ, 186 ದಿನ) ಮೊದಲಿಗರು.

    1. ರಿಷಭ್ ಪಂತ್(2,028) ಎಸೆತಗಳ ಲೆಕ್ಕಚಾರದಲ್ಲಿ ವೇಗವಾಗಿ 3 ಸಾವಿರ ರನ್‌ಗಳಿಸಿದ ಭಾರತೀಯ ಎನಿಸಿದರು. ಯೂಸ್ು ಪಠಾಣ್ (2,062) ಹಿಂದಿನ ಸಾಧಕ.

    1. ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್‌ನಲ್ಲಿ ಲಖನೌ ಎದುರು 160ಪ್ಲಸ್ ರನ್ ಯಶಸ್ವಿ ಚೇಸಿಂಗ್ ನಡೆಸಿದ ಮೊದಲ ತಂಡ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts