ಮಣಿಪುರ: ಶೋಧ ಕಾರ್ಯಾಚರಣೆಯಲ್ಲಿ ಪತ್ತೆಯಾಯ್ತು ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳು!

Untitled design - 2023-10-20T192447.223
Published on

ಮಣಿಪುರ: ಶೋಧ ಕಾರ್ಯಾಚರಣೆಯ ವೇಳೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಪತ್ತೆಯಾಗಿದ್ದು, ಒಟ್ಟಾರೆ ಬೃಹತ್ ಸಂಗ್ರಹವನ್ನು ಇದೀಗ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಘಟನೆ ಗುರುವಾರ (ಅ.20) ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ವರದಿಯಾಗಿದೆ.

ಕಾಕ್ಚಿಂಗ್, ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಫ್ರಿಂಜ್ ಮತ್ತು ದುರ್ಬಲ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ. ತರುವಾಯ, ವಾಕನ್, ಶಾಂತಿಪುರ ಮತ್ತು ಖಮೆನ್ಲೋಕ್ ಪರ್ವತಶ್ರೇಣಿಗಳಿಂದ ಅಪಾರ ಸಂಖ್ಯೆಯ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸಲಕರಣೆಗಳ ಬೃಹತ್ ಸಂಗ್ರಹವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.

ಎಕೆ-47/56, ಸುಧಾರಿತ ರೈಫಲ್, ಕಾರ್ಬೈನ್ ಮೆಷಿನ್ ಗನ್, ಲ್ಯಾಥೋಡ್ ಲಾಂಚರ್‌ಗಳು ಮತ್ತು ರಿವಾಲ್ವರ್‌ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಂತೆ ಒಟ್ಟು 36 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ, INSAS ರೈಫಲ್, ಹ್ಯಾಂಡ್ ಗ್ರೆನೇಡ್, ಡಿಟೋನೇಟರ್, ಸ್ಥಳೀಯ ನಿರ್ಮಿತ ಪಿಸ್ತೂಲ್ ಅನ್ನು ಒಳಗೊಂಡಿರುವ ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು (1615 ಸಂಖ್ಯೆಗಳು) ವಶಪಡಿಸಿಕೊಳ್ಳಲಾಗಿದೆ.

ಶೋಧ ಕಾರ್ಯಾಚರಣೆಯಲ್ಲಿ ಒಟ್ಟು 132 ಸಂಖ್ಯೆಯ ಉಪಕರಣಗಳು ಸಹ ಪತ್ತೆಯಾಗಿವೆ. ವಶಪಡಿಸಿಕೊಂಡ ವಸ್ತುಗಳನ್ನು ಹೆಚ್ಚಿನ ಕಾನೂನು ವಿಧಿವಿಧಾನಗಳಿಗಾಗಿ ಸಾಗೋಲ್ಮಾಂಗ್ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಮೇ 3, 2023 ರಿಂದ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗಿರುವ ರಾಜ್ಯದ ಅಂಚು ಮತ್ತು ದುರ್ಬಲ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳು ಸದ್ಯ ಮುಂದುವರೆದಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net