ಬೃಹತ್ ಸೇತುವೆ ಕುಸಿತ: ಬ್ರಿಡ್ಜ್​ ಬಗ್ಗೆ ವಿಶ್ವಾದ್ಯಂತ ಪ್ರಚಾರ ಮಾಡಿದ್ದ ಚೀನಾಕ್ಕೀಗ ಮುಜುಗರ! | Bridge Collapse

Bbau - 2025-11-12T100208.581
Published on

ಚೀನಾ: ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನಲ್ಲಿ ಹೊಸದಾಗಿ ನಿರ್ಮಿಸಿದ ಬೃಹತ್​ ಸೇತುವೆ(Bridge Collapse) ಮಂಗಳವಾರ ಕುಸಿದಿದೆ. ಅದೃಷ್ಟವಾಶತ್​, ಈ ಘಟನೆಯಲ್ಲಿ ಯಾರು ಗಾಯಗೊಂಡಿಲ್ಲ.

ಇತ್ತೀಚಿಗೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸೇತುವೆ ಏಕಾಏಕಿ ಕುಸಿತಗೊಂಡಿದೆ. ಬ್ರಿಡ್ಜ್​ ಕುಸಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆಯು ಚೀನಾದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಸೇತುವೆಯನ್ನು ಚೀನಾದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಪರಾಕ್ರಮದ ಸಂಕೇತವೆಂದು ವಿಶ್ವಾದ್ಯಂತ ಪ್ರಚಾರ ಮಾಡಲಾಗಿತ್ತು. ಆದರೆ, ಬ್ರಿಡ್ಜ್​​ ಕುಸಿತವು ಸರ್ಕಾರಕ್ಕೆ ಗಮನಾರ್ಹ ಮುಜುಗರವನ್ನುಂಟುಮಾಡಿದೆ.

ಚೀನಾ ಸರ್ಕಾರ ತನಿಖೆಗೆ ಆದೇಶ

ಚೀನಾದಲ್ಲಿ ಸೇತುವೆ ಕುಸಿತದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವೀಡಿಯೊ ಸಂಪೂರ್ಣ ಕುಸಿತವನ್ನು ತೋರಿಸುತ್ತಿದ್ದು, ಅದರ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅನೇಕ ಬಳಕೆದಾರರು ಇದನ್ನು ಎಂಜಿನಿಯರಿಂಗ್ ನಿರ್ಲಕ್ಷ್ಯದಿಂದ ಉಂಟಾಗಿದೆ ಎಂದು ಹೇಳುತ್ತಿದ್ದರೆ, ಇತರರು ಇದನ್ನು ನೈಸರ್ಗಿಕ ವಿಕೋಪದಿಂದ ಉಂಟಾಗಿದೆ ಎಂದು ಹೇಳುತ್ತಿದ್ದಾರೆ.

ಅಪಘಾತದ ಬಗ್ಗೆ ತನಿಖೆಗೆ ಚೀನಾ ಸರ್ಕಾರ ಆದೇಶಿಸಿದೆ. ನಿರ್ಮಾಣ ಸಾಮಗ್ರಿಗಳು ಮತ್ತು ಭೂವೈಜ್ಞಾನಿಕ ಸಮೀಕ್ಷೆಗಳ ಗುಣಮಟ್ಟವನ್ನು ಸಹ ಪ್ರಶ್ನಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಘಟನೆಯು 2021 ರಲ್ಲಿ 38 ಜನರನ್ನು ಬಲಿ ತೆಗೆದುಕೊಂಡ ಗೆಝೌಬಾ ಸೇತುವೆ ದುರಂತವನ್ನು ನೆನಪಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net