ಅಂತರ್​ತಾರಾ ಧೂಮಕೇತು ಸ್ಪಷ್ಟ ಚಿತ್ರ ತೆಗೆದ ಹಬಲ್

Untitled design (1)
Published on

ನವದೆಹಲಿ: ಖಗೋಳಶಾಸ್ತ್ರಜ್ಞರ ತಂಡವೊಂದು ನಿಗೂಢ ಅಂತರ್​ತಾರಾ ಕಾಯವೊಂದರ ಇದುವರೆಗಿನ ಅತ್ಯಂತ ಸ್ಪಷ್ಟ ಚಿತ್ರವನ್ನು ತೆಗೆಯುವಲ್ಲಿ ಯಶಸ್ವಿಯಾಗಿದೆ. ಅಮೆರಿಕದ ವ್ಯೋಮಾಂತರಿಕ್ಷ ಸಂಸ್ಥೆಯ (ನಾಸಾ) ಹಬಲ್ ದೂರದರ್ಶಕವನ್ನು ಬಳಸಿ 31/ಅಟ್ಲಾಸ್ ಧೂಮಕೇತುವಿನ ಚಿತ್ರವನ್ನು ತಂಡ ಸೆರೆ ಹಿಡಿದಿದೆ. ಈ ಕಾಯವು ಗಂಟೆಗೆ 2,09,215 ಕಿಲೋ ಮೀಟರ್ ವೇಗದಲ್ಲಿ ನಮ್ಮ ಸೌರಮಂಡಲದ ಮೂಲಕ ಹಾದು ಹೋಗುತ್ತಿದೆ ಎಂದು ನಾಸಾ ಹೇಳಿದೆ.

ನಮ್ಮ ಸೌರ ಮಂಡಲಕ್ಕೆ ಭೇಟಿ ನೀಡಿದ ಯಾವುದೇ ಕಾಯದ ಗರಿಷ್ಠ ವೇಗ ಇದಾಗಿದೆ. ಅನೇಕ ಶತಕೋಟಿ ವರ್ಷಗಳಿಂದ ಅಂತರ್​ತಾರಾ ವ್ಯೋಮದ ಮೂಲಕ ಈ ಕಾಯ ದೂರ ಸರಿಯುತ್ತಿದೆ ಎಂದು ನಾಸಾ ತಜ್ಞರು ತಿಳಿಸಿದ್ದಾರೆ. ಈ ಧೂಮಕೇತುವನ್ನು ವೀಕ್ಷಿಸಲು ನಾಸಾ ನಿಯೋಜಿಸಿರುವ ಹಲವು ಟೆಲಿಸ್ಕೋಪ್​ಗಳಲ್ಲಿ ಹಬಲ್ ಕೂಡ ಒಂದಾಗಿದೆ. ಕಾಯದ ಗಾತ್ರ ಮತ್ತು ಅದರ ಭೌತಿಕ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅದು ಒದಗಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net