

ಮೇಷ: ಈ ವಾರದ 8ನೇ ತಾರೀಖಿನಿಂದ 14ರವರೆಗೂ ಉತ್ತಮ ದಿನಗಳನ್ನು ಕಾಣುತ್ತೀರ. ನ. 11,14 ನಿಮ್ಮ ಕಾರ್ಯ ಸಾಧಿಸುವ ದಿನ. 15ರಂದು ಏನನ್ನೂ ಮಾಡದಿರಿ. ನ. 12 ಗುರುದ್ವಾದಶಿ. ನರಸೋಭವಾಡಿಯಲ್ಲಿ ವಿಶೇಷ ದಿನ. ಸಾಧ್ಯವಾದಲ್ಲಿ ದತ್ತನನ್ನು ಪ್ರಾರ್ಥಿಸಿ. ಗುರುವು ನವಮದಿಂದ ದಶಮಕ್ಕೆ ಹೋಗುವ ಕಾಲ. ಗುರುವಿಲ್ಲದೆ ಗುರಿಮುಟ್ಟಲಾಗದು. ವಸಿಷ್ಠರಿಲ್ಲದಿದ್ದಲ್ಲಿ ದಶರಥ ಪುತ್ರ ರಾಮನನ್ನು ಯಾರೂ ಗುರುತಿಸುತ್ತಿರಲಿಲ್ಲ.
ವೃಷಭ: ನ.14ರಂದು ಕುಬೇರ ಮಹಾಲಕ್ಷ್ಮಿಯನ್ನು ಪೂಜೆ ಮಾಡಿ ನಿಮ್ಮ ಧನಸಂಕಷ್ಟ ನಿವಾರಿಸಿಕೊಳ್ಳಿ. 9ರಂದು ಯಾವುದೇ ಕೆಲಸ ಮಾಡಬೇಡಿ. ನ. 10ರಿಂದ 14ರವರೆಗೆ ದೀಪಾವಳಿಯು ನಿಮಗೆ ಆನಂದ, ಮನೆಯಲ್ಲಿ ಮಂಗಳಕಾರ್ಯ ಸೂಚಿಸುತ್ತದೆ. ಹೆಣ್ಣಿನಲ್ಲಿ ದೈವವನ್ನು ಕಾಣು ಎಂಬುದನ್ನು ಜ್ಞಾಪಿಸಿಕೊಳ್ಳಿ. 15ರಂದು ಗೋಪೂಜೆ ಮಾಡಿ ಪುಣ್ಯ ಶೇಖರಣೆ ಮಾಡಿ. ಮಹಾವಿಷ್ಣುವನ್ನು ಪ್ರಾರ್ಥಿಸಿ. ವಾಮನ, ವಿಷ್ಣು ಅಷ್ಟೋತ್ತರ ಪಠಿಸಿ.
ಮಿಥುನ: ಕೆಲವೇ ದಿನದಲ್ಲಿ ಗುರುವು ಸಪ್ತಮದಿಂದ ಅಷ್ಟಮಕ್ಕೆ ತೆರಳುತ್ತಾನೆ. ಆರೋಗ್ಯದ ಬಗ್ಗೆ ಎಚ್ಚರ. ಧನ್ವಂತರಿ ಜಪ ಮಾಡಿ. ಆರೋಗ್ಯಕ್ಕೆ ಸೂರ್ಯನ ಪ್ರಾರ್ಥನೆ ಅವಶ್ಯ. ಅಷ್ಟಮಶನಿ ಮತ್ತು ಗುರುವು ಆರೋಗ್ಯದ ಸಮಸ್ಯೆ ತರಬಹುದು. ಪುನರ್ವಸು ನಕ್ಷತ್ರದಲ್ಲಿ ಜನಿಸಿದ ರಾಮನನ್ನು ಪ್ರಾರ್ಥಿಸಿದಲ್ಲಿ ಕೆಟ್ಟ ಕಾಲವು ಒಳ್ಳೆಯ ಕಾಲವಾಗುವುದು. ಪೀರಾಪುರದ ದತ್ತನನ್ನು ಪ್ರಾರ್ಥಿಸಿ. ಈ ಸಲಹೆ ಪಾಲಿಸಿದರೆ ದೀಪಾವಳಿ ನಿಮ್ಮ ಬಾಳಿಗೆ ಬೆಳಕನ್ನು ತರುತ್ತದೆ.
ಕಟಕ: ನ.20ನೇ ತಾರೀಖಿನಂದು ಗುರುವು ಸಪ್ತಮಕ್ಕೆ ಬಂದು ಶನಿಯನ್ನು ಒಡಗೂಡಿ ಮಿಶ್ರಫಲ ದಯಪಾಲಿಸುತ್ತಾನೆ. ಇನ್ನು ಮುಂದೆ ನಿಮ್ಮ ತಾಪತ್ರಯಗಳು, ಆರೋಗ್ಯ ಸಮಸ್ಯೆ ಕಡಿಮೆಯಾಗಲಿದೆ. ಚಂದ್ರಾಧಿಪತ್ಯ ಹೊಂದಿರುವ ಕರ್ಕಾಟಕ ರಾಶಿಯವರಾದ ನೀವು ಮಹಾಕಾಳೇಶ್ವರನನ್ನು ಪೂಜಿಸಿ ರುದ್ರಪಾರಾಯಣ ಮಾಡಿಸಿ ಸಕಲಾಭಿಷ್ಟ ಹೊಂದಬಹುದು. ಶಿವನ ದಾರಿದ್ರ್ಯದಹನ ಸ್ತೋತ್ರವನ್ನು ಪಠಿಸಿ. ‘ಹ್ರೀಂ ನಮಃ ಶಿವಾಯ’ಎಂಬ ಮಂತ್ರ ನಿಮ್ಮ ಉಸಿರಾಗಿರಲಿ.
ಸಿಂಹ: ಐದರ ಗುರು-ಶನಿ ಆರರಲ್ಲಿದ್ದು ಸುಖ, ಆನಂದ ಅನುಭವಿಸಿದ್ದೀರಿ. ಖರ್ಚನ್ನು ಸಮತೋಲನ ಮಾಡಲು ಧನಲಾಭವಾಗಿದೆ. ನ.20ರಿಂದ ಗುರುವು ಆರನೇ ಮನೆಗೆ ಹೋಗುತ್ತಾನೆ. ಶನಿಯ ಮನೆಗೆ ಬಂದು ಸೇರುತ್ತಾನೆ. ಮನಸ್ಸಿಗೆ ದ್ವಂದ್ವ ಉಂಟಾಗುತ್ತದೆ. ಆದರೆ ಆರರ ಶನಿ ಕೈಹಿಡಿದು ನಡೆಸುತ್ತಾನೆ. ಗುರುಪೀಠವನ್ನು ಸಂದರ್ಶಿಸಿ. ದೀಪದ ಹಬ್ಬದಲ್ಲಿ ನಿತ್ಯವೂ ಮುಂಭಾಗದಲ್ಲಿ ಎರಡು ದೀಪ ಬೆಳಗಿಸಿ. ಜೀವನದಲ್ಲಿ ಬೆಳಕನ್ನು ಕಂಡುಕೊಳ್ಳಿ.
ಕನ್ಯಾ: ಕುರುವಪುರದಲ್ಲಿ ನೆಲೆಸಿರುವ ಸಾಕ್ಷಾತ್ ಪರಮೇಶ್ವರ ಸ್ವರೂಪಿ, ತ್ರೖೆಮೂರ್ತಿಯ ಅವತಾರದಲ್ಲಿ ಇರುವ ದತ್ತನನ್ನು ವಂದಿಸಿ. ನ.20ರಿಂದ ಗುರುವು 5ನೇ ಮನೆಗೆ ಚಲಿಸುತ್ತಾನೆ. ಗುರುವಿನ ಅನುಗ್ರಹವಿರಲಿ. ದೈವಶಾಪಕ್ಕೆ ಶಾಂತಿಯನ್ನು ಮಾಡಬಹುದು. ಆದರೆ ಮೊಟ್ಟಮೊದಲ ಗುರು ತಂದೆ-ತಾಯಿಯರನ್ನು ನೋಯಿಸದಿರಿ. ಆ ಶಾಪಕ್ಕೆ ಶಾಂತಿ-ಪರಿಹಾರವಿಲ್ಲ. ಗುರು-ಗುರುಪತ್ನಿಯನ್ನು ಗೌರವಿಸಿ.
ತುಲಾ: ತುಲಾ ರಾಶಿಗೆ ಭಾಗ್ಯವನ್ನು ಕೊಡುವವನು ಕಾಲಭೈರವ. ಕಾಲಭೈರವನ ವಿಶೇಷ ಪೂಜೆ ನಡೆಯುವುದು ಕಾಶಿಯಲ್ಲಿ. ದಕ್ಷಿಣ ಭಾರತದಲ್ಲಿ ಕಾಲಭೈರವನಿಗೆ ವಿಶೇಷ ಪೂಜೆ ಮಾಡಿ. ನಿಮ್ಮ ಮನೆಯಲ್ಲೇ ಕಾಲಭೈರವಾಷ್ಟಕವನ್ನು ಪಠಿಸಿ. ರುದ್ರಪಾರಾಯಣ ಮಾಡಿ. ನ.14ರಂದು ಧನಕ್ಷ್ಮಿಯನ್ನು ಪೂಜಿಸಿದಲ್ಲಿ ಕಾರ್ಯ ಈಡೇರುತ್ತದೆ. ಹಬ್ಬದ ವಿಶೇಷತೆ ನಿತ್ಯ ದೀಪವನ್ನು ಬೆಳಗಿಸುವುದು. ವಿಶೇಷವಾಗಿ ಪಂಚದುರ್ಗೆಯನ್ನು ಪ್ರಾರ್ಥಿಸಿ.
ವೃಶ್ಚಿಕ: ಈ ರಾಶಿಗೆ ದ್ವಿತೀಯ ಗುರುವಿದ್ದು ವ್ಯಾಪಾರ, ವಹಿವಾಟು, ಉದ್ಯೋಗದಲ್ಲಿ ಜಯ. ದುರಾಸೆ ಬೇಡ. ನೀವು ಗುರುವಿನ ಅನುಗ್ರಹ ಪಡೆಯಬೇಕೇ ಹೊರತು ಆಗ್ರಹವಲ್ಲ. ರಾಶಿ ಭವಿಷ್ಯದಲ್ಲಿ ಮನುಷ್ಯನಿಗೆ ತಿಳಿಯದ ಕಾಲ ವಿಳಂಬವಾಗಬಹುದು. ಅದಕ್ಕೆ ಹಿಂದಿನ ಜನ್ಮದ ಕರ್ಮವೇ ಕಾರಣ. ಆದರೂ ನ.15ರಂದು ಕುಜನು ವಕ್ರತ್ಯಾಗ ಮಾಡಿ ಭವಿಷ್ಯ ಬದಲಾಯಿಸುತ್ತಾನೆ. ಗೋಗ್ರಾಸ(ಅಕ್ಕಿಬೆಲ್ಲ) ನೀಡಿ ಗೋವನ್ನು ಪೂಜಿಸಿ. ಉಜ್ವಲ ಬೆಳಕನ್ನು ನೀಡಿ.
ಧನು: ಜನ್ಮ ಗುರುವು ದ್ವಿತೀಯಕ್ಕೆ ಬರುತ್ತಾನೆ. ಪ್ರಾತಃ ಕಾಲದಲ್ಲಿ ಆಲಸ್ಯ ಬೇಡ. ದಿನದ ಸೂರ್ಯೋ ದಯದ ಸಮಯ 6ರಿಂದ 9ರವರೆಗೆ ಹಾಳು ಮಾಡದಿರಿ. ನಿಮ್ಮ ದೈನಂದಿನ ಕೆಲಸ, ಉದ್ಯೋಗ, ವ್ಯಾಪಾರದಲ್ಲಿ ಪ್ರಗತಿ ಕಾಣುವಿರಿ. ವಿಚಾರದಲ್ಲಿ ವಿವೇಕವಿರಲಿ. ಮನೆ-ಮಂದಿ, ಮಕ್ಕಳು ಎಲ್ಲರಿಗೂ ಪ್ರೀತಿ ತೋರಿ ರಾತ್ರಿಯಲ್ಲಿ ವಿಶೇಷವಾದ ದೀಪ ಬೆಳಗಿಸಿ ಜಯದುರ್ಗಾಪೂಜೆ ಮಾಡಿ.
ಮಕರ: ಅಧ್ಯಾತ್ಮ ರಾಮಾಯಣದಲ್ಲಿ ಶ್ರೀರಾಮಚಂದ್ರನೇ ಲಕ್ಷ್ಮಣನಿಗೆ ಮನುಷ್ಯರಿಗೆ ಇರಬೇಕಾದ ಸಜ್ಜನಿಕೆ, ತಿಳುವಳಿಕೆ, ಎಚ್ಚರವನ್ನು ನೀಡಿರುತ್ತಾನೆ. ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳೇ ದುಃಖಕ್ಕೆ ಕಾರಣ. ಪುಣ್ಯಫಲಗಳು ಸುಖಕ್ಕೆ ಕಾರಣವಾಗುತ್ತವೆ. ಯಾರನ್ನೂ ದೂಷಿಸಿ, ನಿಂದಿಸಬೇಡಿ. ವ್ಯಾಸ ಮಹರ್ಷಿಯನ್ನು ಪೂಜಿಸಿ. ಗುರು ಅಷ್ಟೋತ್ತರ ಪಠಿಸಿ. ಮಾಡಿದ ಪಾಪಗಳನ್ನು ದೇವರ ಮುಂದೆ ಪ್ರಕಟಪಡಿಸಿದಲ್ಲಿ ಗುರುವೇ ಕೈಹಿಡಿದು ನಡೆಸುತ್ತಾನೆ.
ಕುಂಭ: ದ್ವಾದಶದಲ್ಲಿ ಗುರು-ಶನಿ ಸಂಯೋಗವು ನ. 20 ರಂದು ಉಂಟಾಗುತ್ತದೆ. ಅಷ್ಟರೊಳಗೆ ಅಲ್ಪಸ್ಪಲ್ಪ ಉಳಿದಿರುವ ಕೆಲಸಗಳನ್ನು ನೆರವೇರಿಸಿ ಸಫಲತೆ ಕಂಡುಕೊಳ್ಳಿ. ‘ನ ದೈವಬಲಂ ದುರ್ಬಲಂ’. ಯಾವ ಗ್ರಹಗಳು ಏನೇ ಮಾಡಿದರೂ ಪರಮಾತ್ಮನ ಸ್ಮರಣೆಯಿಂದ ಉಂಟಾಗುವ ಕೆಡುಕನ್ನು ನಿವಾರಿಸಿ ಉಜ್ವಲ ಬೆಳಕನ್ನು ಕಂಡುಕೊಳ್ಳಬಹುದು. ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿಯನ್ನು ಪ್ರಾರ್ಥಿಸಿ. ಸಾಧ್ಯವಾದಲ್ಲಿ ಶ್ರೀಶೈಲ ಯಾತ್ರೆ ಮಾಡಿ.
ಮೀನ: ಮತ್ಸ್ಯಕ್ಕೂ-ಮಕರಕ್ಕೂ ನೀರೇ ಆಶ್ರಯ. ಮನುಷ್ಯನು ಪಂಚಭೂತಗಳಾದ ಅಗ್ನಿ, ವಾಯು, ಜಲ, ಭೂಮಿ, ಆಕಾಶ ಇವನ್ನು ಬಿಟ್ಟು ಬದುಕಲು ಸಾಧ್ಯವೇ? ಜೀವನದ ಕಡೆಯಲ್ಲಿ ಎಷ್ಟೋ ಜನರು ಜಲಸಿಗದೆ ಮೋಕ್ಷ ಕಂಡಿಲ್ಲ. ನ.20ರಿಂದ ಗುರುವು ಏಕಾದಶಕ್ಕೆ ಬಂದು ನಿಮ್ಮನ್ನು ತರ್ಕೀಯವಾದ ವಿಚಾರಗಳಿಂದ ಹೊರತಂದು ಸ್ವತಂತ್ರವಾದ ಧ್ಯೇಯ ಮೂಡಿಸುತ್ತಾನೆ. ದೇಶದ ಪ್ರಜೆಗಳಿಗೆ ಆರೋಗ್ಯ, ಜೀವನದ ಬೆಳಕನ್ನು ನೀಡೆಂದು ಜನಾರ್ದನನಲ್ಲಿ ಪ್ರಾರ್ಥಿಸಿ.