

ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿವಾಹದ ಸಂದರ್ಭದಲ್ಲಿ ಬ್ರೈಡ್ಸ್ಮೇಡ್ (ಮೇಡ್ ಆಫ್ ಹಾನರ್) ಎಂಬ ಒಂದು ಪದ್ಧತಿಯಿದೆ.
ಅಂದರೆ ಮದುವೆ ಸಂದರ್ಭದಲ್ಲಿ ವಧುವಿನ ಜತೆ ಅವಳ ಆತ್ಮೀಯ ಗೆಳತಿಯರೂ ಅಲಂಕರಿಸಿಕೊಂಡು, ಫೋಟೋಶೂಟ್ ಮಾಡಿಸುತ್ತಾರೆ. ಅಷ್ಟೇ ಅಲ್ಲ ಮದುವೆ ಮುಗಿಯುವವರೆಗೂ ಇವರೆಲ್ಲ ವಧುವಿನ ಜತೆಯೇ ಇದ್ದು, ಆಕೆಯನ್ನು ರಾಣಿಯೆಂಬಂತೆ ನೋಡಿಕೊಳ್ಳುತ್ತಾರೆ. ತನ್ನೊಂದಿಗೆ ಯಾವೆಲ್ಲ ಗೆಳತಿಯರು ಇರಬೇಕು ಎಂಬುದನ್ನು ಈ ಯುವತಿಯೇ ಆಯ್ಕೆ ಮಾಡಿಕೊಳ್ಳುತ್ತಾಳೆ.
ಈಗ ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣವೊಂದಿದೆ. ಯುಕೆಯ ಯುವತಿಯೋರ್ವಳು ಫೇಸ್ಬುಕ್ನಲ್ಲಿ ಇದೇ ವಿಚಾರವನ್ನು ಬರೆದುಕೊಂಡಿದ್ದಾಳೆ. ನನ್ನ ಅತ್ಯಂತ ಆತ್ಮೀಯ ಗೆಳತಿಯೋರ್ವಳ ಮುಂದಿನ ಹಲ್ಲು ಹುಳುಕಾಗಿದೆ ಎಂಬ ಒಂದೇ ಕಾರಣಕ್ಕೆ ಅವಳನ್ನು ನನ್ನ ಮದುವೆಯಲ್ಲಿ ನನ್ನ ಜತೆ ಇರುವುದು ಬೇಡ ಎಂದು ಹೇಳಿದೆ ಎಂದು ಹೇಳಿದ್ದಾರೆ.
ನಾವಿಬ್ಬರೂ ಪುಟ್ಟ ಮಕ್ಕಳಾಗಿದ್ದಾಗಿನಿಂದಲೂ ಪರಿಚಿತರು. ಒಟ್ಟಿಗೇ ಆಡಿ ಬೆಳೆದಿದ್ದೇವೆ. ಆದರೆ ಕೆಲವು ವರ್ಷಗಳ ಹಿಂದೆ ನನ್ನ ಗೆಳತಿಯ ಕುಟುಂಬದವರು ಬೇರೆ ಕಡೆಗೆ ಹೋಗಿ ನೆಲೆಸಿದ್ದಾರೆ. ಈ ಕಾರಣದಿಂದ ಇತ್ತೀಚೆಗೆ ಭೇಟಿಯಾಗಿರಲಿಲ್ಲ. ಮಾತನಾಡುತ್ತಿದ್ದೆವು ಆದರೆ ಮುಖತಃ ಭೇಟಿಯಾಗಿರಲಿಲ್ಲ. ಈಗ ನನ್ನ ಮದುವೆ ಕಾಯಂ ಆಯಿತಲ್ಲ. ನನ್ನ ಪಾಲಿನ ವಿಶೇಷದಿನದಂದು ನನ್ನೊಂದಿಗೆ ಅವಳೂ ಇರಲಿ ಎಂದು ಬಯಸಿದೆ. ಮೇಡ್ ಆಫ್ ಹಾನರ್ ನೀಡಲು ಬಯಸಿದೆ. ಆದರೆ ಆಕೆಯನ್ನು ಭೇಟಿಯಾದ ನನಗೆ ಬಿಗ್ ಶಾಕ್ ಕಾದಿತ್ತು...ಆಕೆಯ ಹಲ್ಲಿನ ಮುಂಭಾಗ ಕೆಟ್ಟುಹೋಗಿತ್ತು. ಆಗ ನನಗೆ ಸ್ವಲ್ಪ ಬೇಸರವಾಯಿತು. ನನ್ನ ಮದುವೆಯದಿನ ಫೋಟೋ ಶೂಟ್ ನಡೆಯುತ್ತಿದೆ. ಇವಳು ನಕ್ಕಾಗ ಚೆನ್ನಾಗಿ ಕಾಣುವುದಿಲ್ಲ ಎಂಬ ಕಾರಣಕ್ಕೆ ಮೇಡ್ ಆಫ್ ಹಾನರ್ ಗೆ ಅವಳನ್ನು ತಿರಸ್ಕರಿಸಿಬಿಟ್ಟೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಇಲಿ ಇಟ್ಟ ಬೆಂಕಿಗೆ ಸುಟ್ಟು ಕರಕಲಾದ ಕಚೇರಿ: 1 ಕೋಟಿ ಆಸ್ತಿ ನಷ್ಟ, ಸಿಸಿಟಿವಿಯಲ್ಲಿ ಇಲಿ ಕೃತ್ಯ ಬಯಲು!
ಅದೆಲ್ಲ ಆದ ಬಳಿಕ ಸಣ್ಣ ಗಿಲ್ಟ್ ಕಾಡುತ್ತಿದೆ. ಈ ಬಗ್ಗೆ ನನ್ನ ಮದುವೆಯಾಗುವವನ ಬಳಿಯೂ ಚರ್ಚಿಸಿದೆ ಎಂದು ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನೆಟ್ಟಿಗರಲ್ಲಿ ಕೆಲವರು ಅದನ್ನು ಸ್ವಾಗತಿಸಿದ್ದರೆ, ಇನ್ನೂ ಕೆಲವರು..ಸ್ನೇಹಿತೆಯ ಸಂತೋಷದ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದಿದ್ದಾರೆ. (ಏಜೆನ್ಸೀಸ್)